ಎಸ್‌ಪಿಬಿಗೆ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಕೆ

Update: 2020-09-20 09:43 GMT

ಚೆನ್ನೈ, ಸೆ.20: ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿರುವ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ವೌಖಿಕ ಆಹಾರ ಸೇವನೆಯನ್ನು ಆರಭಿಸಿದ್ದು, ಫಿಜಿಯೋಥೆರಪಿ ಅಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ಎಸ್‌ಪಿಬಿ ಪುತ್ರ, ನಿರ್ಮಾಪಕ-ನಿರ್ದೇಶಕ ಎಸ್‌ಪಿ ಚರಣ್ ಶನಿವಾರ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಆದಾಗ್ಯೂ 74 ವರ್ಷದ ಗಾಯಕ ಇನ್ನೂ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ.

ಎಸ್‌ಪಿಬಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಕೊರೋನದ ಸೌಮ್ಯ ಲಕ್ಷಣಗಳಿದ್ದವು. ಆದರೆ ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು ತೀವ್ರ ನಿಗಾ ಘಟಕ ಅಥವಾ ಐಸಿಯುಗೆ ಸ್ಥಳಾಂತರಿಸಲಾಯಿತು. ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಯಿತು.

ತನ್ನ ತಂದೆಯ ಆರೋಗ್ಯವನ್ನು ಹಂಚಿಕೊಂಡ ಚರಣ್, "ಅಪ್ಪಾ ಸ್ಥಿರವಾಗಿದ್ದಾರೆ. ಅವರನ್ನು ವೆಂಟಿಲೇಟರ್‌ನಲ್ಲಿ ಮುಂದುವರಿಸಲಾಗಿದೆ. ಅವರಿಗೆ ಯಾವುದೇ ಸೋಂಕು ಇಲ್ಲ.ಶ್ವಾಸಕೋಶ ಉಸಿರಾಟದಲ್ಲಿ ಇನ್ನೂ ಸುಧಾರಣೆಯಾಗಬೇಕಾಗುತ್ತದೆ. ಅವರು ಕುಳಿತುಕೊಳ್ಳಲು ಸಮರ್ಥರಾಗಿದ್ದಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News