ಕೊರೋನದಿಂದ ಚೇತರಿಸಿದ ಬಿಜೆಪಿ ಶಾಸಕನಿಂದ ಮಾಸ್ಕ್ ಧರಿಸದೆ ದೇವಸ್ಥಾನದೊಳಗೆ ನೃತ್ಯ !

Update: 2020-09-20 12:19 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದ ಬಿಜೆಪಿ ಶಾಸಕರೊಬ್ಬರು ಮಾಸ್ಕ್ ಧರಿಸದೆ ದೇವಸ್ಥಾನದೊಳಗೆ ನೃತ್ಯ ಮಾಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ವಡೋದರದ ಗಜ್ರವಾಡಿಯ ದೇವಸ್ಥಾನವೊಂದರಲ್ಲಿ ಶಾಸಕ ಮಧು ಶ್ರೀವಾಸ್ತವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಮಾಸ್ಕ್ ಧರಿಸದೆ ನೃತ್ಯ ಮಾಡಿದ್ದಾರೆ. ಅವರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ದೇವಸ್ಥಾನದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಸತ್ಯ. ನಾನು ಪ್ರತಿ ಶನಿವಾರ ಇದನ್ನು ಮಾಡುತ್ತೇನೆ. ಇದೇನೂ ಹೊಸದಲ್ಲ. ನಾನು ಯಾವುದೇ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ. ಸರಕಾರ ಜನ ಸೇರುವುದಕ್ಕೆ ಅನುಮತಿ ನೀಡಿದೆ. ಅಲ್ಲಿ ಕೆಲವೇ ಜನರಿದ್ದರು” ಎಂದು ಶಾಸಕ ಮಧು ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News