ಮಣಿಪಾಲ ಕ್ರೈಮ್ ಪೊಲೀಸ್ ಸಿಬ್ಬಂದಿಯಿಂದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಹಲವು ಮಂದಿಯ ರಕ್ಷಣೆ
Update: 2020-09-20 19:30 IST
ಮಣಿಪಾಲ, ಸೆ.20: ಅಲೆವೂರು ಪೆರುಪಾದೆ ಎಂಬಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಹಲವು ಮಂದಿಯನ್ನು ಮಣಿಪಾಲ ಕ್ರೈಂ ಸಿಬ್ಬಂದಿ ಹಾಗೂ ಇತರರು ರಕ್ಷಿಸಿ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಠಾಣೆಗೆ ಬಂದ ಮಾಹಿತಿಯಂತೆ ತಕ್ಷಣ ಕಾರ್ಯಪ್ರವೃತರಾದ ಪೊಲೀಸ್ ಸಿಬ್ಬಂದಿಗಳಾದ ಅಬ್ದುಲ್ ರಝಾಕ್, ಥೋಮ್ಸನ್ ಹಾಗು ಇತರರು ಪ್ರವಾಹ ಪೀಡಿತ ಸ್ಥಳಕ್ಕೆ ಧಾವಿಸಿ ಹಗ್ಗ, ಟ್ಯೂಬ್ ಹಾಗೂ ಮಗುವಿನ ತೊಟ್ಟಿಲು ಬಳಸಿ ಮಹಿಳೆ ಯರು ಸೇರಿದಂತೆ ಹಲವು ಮಂದಿಯನ್ನು ಮತ್ತು ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.