ದ.ಕ.ಜಿಲ್ಲೆ : 380 ಮಂದಿಗೆ ಕೊರೋನ ಸೋಂಕು, ಆರು ಬಲಿ

Update: 2020-09-20 16:00 GMT

ಮಂಗಳೂರು, ಸೆ.20: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ಏತನ್ಮಧ್ಯೆ, ಕೊರೋನದಿಂದಾಗಿ ಮರಣ ಮೃದಂಗ ಮುಂದುವರಿದಿದ್ದು, ರವಿವಾರ ಮತ್ತೆ ಆರು ಮಂದಿ ಮೃತಪಟ್ಟಿದ್ದಾರೆ. ರವಿವಾರ ಮತ್ತೆ 380 ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದ್ದು, 353 ಮಂದಿ ಕೊರೋನದಿಂದ ಗುಣಮುಖರಾಗಿದ್ದಾರೆ.

ಮೃತರ ಪೈಕಿ ಪುತ್ತೂರು ತಾಲೂಕಿನ ಇಬ್ಬರು, ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ ತಲಾ ಓರ್ವರು ಹಾಗೂ ಹೊರಜಿಲ್ಲೆಯ ಇಬ್ಬರು ಇದ್ದಾರೆ. ಮೃತರೆಲ್ಲ ಕೊರೋನ ಸಹಿತ ಹಲವು ರೋಗಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 482ಕ್ಕೆ ಏರಿಕೆಯಾಗಿದೆ.

 380 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕು ನಿಯಂತ್ರಣವು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ ಪರಿಣಮಿಸಿದೆ. ರವಿವಾರವೂ 380 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾಮಾನ್ಯ ಶೀತ ಲಕ್ಷಣ- 139, ಸೋಂಕಿತರ ಸಂಪರ್ಕಿತರು- 127, ತೀವ್ರ ಉಸಿರಾಟ ತೊಂದರೆಯ ಎಂಟು ಮಂದಿಗೆ ಸೋಂಕು ತಗುಲಿದೆ. ಇನ್ನು, 106 ಮಂದಿಗೆ ಸೋಂಕು ಯಾರಿಂದ ಹರಡಿದೆ ಎನ್ನುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ಪತ್ತೆಕಾರ್ಯದಲ್ಲಿ ತೊಡಗಿದೆ.

ರವಿವಾರವೂ ಸೋಂಕಿತರ ಸಂಖ್ಯೆಯಲ್ಲಿ ಮಂಗಳೂರು ತಾಲೂಕು ಅಗ್ರಸ್ಥಾನದಲ್ಲಿ (180) ಇದೆ. ಇನ್ನುಳಿದಂತೆ, ಬಂಟ್ವಾಳ-74, ಪುತ್ತೂರು-64, ಸುಳ್ಯ-12, ಬೆಳ್ತಂಗಡಿ-30, ಹೊರಜಿಲ್ಲೆಯ 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20,0134ಕ್ಕೆ ಏರಿಕೆಯಾಗಿದೆ.

353 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಚೇತರಿಕೆಯ ಹಾದಿ ಹಿಡಿದಿರುವುದು ಆಶಾದಾಯಕವಾಗಿದೆ. ರವಿವಾರವೂ 353 ಮಂದಿ ಕೊರೋನಮುಕ್ತರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 37 ಮಂದಿ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 316 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 15,101 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4,550 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News