ಇಲ್ಲಿ ಕೊರೋನ ನಿಯಮ ಉಲ್ಲಂಘಿಸುವವರಿಗೆ 9.50 ಲಕ್ಷ ರೂ. ದಂಡ !

Update: 2020-09-20 16:03 GMT

ಲಂಡನ್,ಸೆ.20: ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿ ಬ್ರಿಟನ್ ಸರಕಾರವು ರವಿವಾರ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದ್ದು, ಕೊರೋನ ವೈರಸ್ ಸೋಂಕಿತರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. 14 ದಿನಗಳ ಸ್ವಯಂ ಐಸೋಲೇಶನ್ ಅವಧಿಯನ್ನು ಉಲ್ಲಂಘಿಸುವ ಕೊರೋನ ಸೋಂಕಿತರಿಗೆ 10 ಸಾವಿರ ಪೌಂಡ್ (ಸುಮಾರು 9.50 ಲಕ್ಷ ರೂ.) ದಂಡ ವಿಧಿಸಲಾಗುವುದು.

‘‘ಕೊರೋನ ವೈರಸ್ ಸೋಂಕನ್ನು ಇತರರಿಗೆ ವರ್ಗಾಯಿಸುವ ಅಪಾಯವಿರುವ ವ್ಯಕ್ತಿಗಳು ತಾವಾಗಿಯೇ ಸ್ವಯಂ ಐಸೋಲೇಶನ್‌ನಲ್ಲಿರುವುದು ಹಾಗೂ ಪ್ರತಿಯೊಬ್ಬರು ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುವುದು ಈ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಇರುವ ಅತ್ಯುತ್ತಮ ಮಾರ್ಗವಾಗಿದೆ ’’ ಎಂದು ನೂತನ ನಿಯಮಾವಳಿಗಳನ್ನು ಪ್ರಕಟಿಸಿದ ಪ್ರಧಾನಿ ಬೊರಿಸ್ ಜಾನ್ಸನ್ ತಿಳಿಸಿದ್ದಾರೆ ಕೋರೊನ ಸೋಂಕಿತರು ಎಎಚ್‌ಎಸ್ ಟೆಸ್ಟ್ ಆ್ಯಂಡ್ ಟ್ರೇಸ್ ತಪಾಸಣೆಗೆ ಒಳಗಾಗುವುದನ್ನು ಈ ನೂತನ ನಿಯಮಾವಳಿಗಳು ಕಡ್ಡಾಯಗೊಳಿಸಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News