ಅಫ್ಘಾನ್ ವಾಯುಪಡೆ ದಾಳಿಗೆ 30ಕ್ಕೂ ಅಧಿಕ ಬಲಿ

Update: 2020-09-20 16:09 GMT
ಸಾಂದರ್ಭಿಕ ಚಿತ್ರ

ಕಾಬೂಲ್,ಸೆ.19: ತಾಲಿಬಾನ್ ನೆಲೆಗಳ ಮೇಲೆ ಅಫ್ಘಾನ್ ವಾಯುಪಡೆ ನಡೆಸಿದ ಸರಣಿ ದಾಳಿಗಳಲ್ಲಿ 30ಕ್ಕೂ ಅಧಿಕ ಬಂಡುಕೋರರು ಸಾವನ್ನಪ್ಪಿದ್ದಾರೆ.

 ಅಫ್ಘಾನ್ ವಾಯುಪಡೆಯ ದಾಳಿಯಲ್ಲಿ ಸುಮಾರು 25ಕ್ಕೂ ಅಧಿಕ ಮಹಿಳೆಯರು ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆಂದು ತಾಲಿಬಾನ್ ಆಪಾದಿಸಿದೆ. ಕತರ್‌ನಲ್ಲಿ ಅಮೆರಿಕ ಜೊತೆ ತಾಲಿಬಾನ್ ಬಂಡುಕೋರರ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವಂತೆಯೇ ಈ ದಾಳಿ ನಡೆದಿದೆ.

ರವಿವಾರ ಬೆಳಗ್ಗೆ ತಾಲಿಬಾನ್ ಬಂಡುಕೋರರು ಕುಂಡುಝ್ ಪ್ರಾಂತದ ಖಾನ್ ಅಬಾದ್ ಜಿಲ್ಲೆಯಲ್ಲಿ ಅಫ್ಘಾನ್ ಸೇನಾ ನೆಲೆಗಳ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಅಫ್ಘಾನ್ ಸೇನೆಯು ದಾಳಿಯನ್ನು ತಡೆಗಟ್ಟಿತ್ತು ಹಾಗೂ ಸಕ್ರಿಯವಾದ ರಕ್ಷಣಾ ಕ್ರಮಗಳನ್ನು ಕೈಗೊಂಡಿತ್ತೆಂದು ಹೇಳಿಕೆಯು ತಿಳಿಸಿದೆ.

ಆದರೆ ಅಫ್ಘಾನ್ ವಾಯುಪಡೆಯ ದಾಳಿಯಲ್ಲಿ ತನ್ನ ಹೋರಾಟಗಾರರು ಸಾವನ್ನಪ್ಪಿಲ್ಲ ಬದಲಿಗೆ ಮಹಿಳೆಯರು ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆಂದು ಅದು ಹೇಳಿದೆ.

 ರಕ್ಷಣಾ ಸಚಿವಾಲಯವು ಈ ಬಗ್ಗೆ ಹೇಳಿಕೆ ನೀಡಿ, ತಾಲಿಬಾನ್‌ನ ಹೇಳಿಕೆಯ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ. ವಾಯುದಾಳಿಯಲ್ಲಿ ಮೃತಪಟ್ಟ ಮೂವರು ನಾಗರಿಕರ ಮೃತದೇಹಗಳನ್ನು ಹಾಗೂ ಗಾಯಗೊಂಡ ಇತರ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯೆಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News