ಉಡುಪಿ ಜಿಲ್ಲೆಯಲ್ಲಿ ಸರಾಸರಿ 19.7ಮಿ.ಮೀ. ಮಳೆ

Update: 2020-09-20 16:24 GMT

ಉಡುಪಿ, ಸೆ.20: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 197ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ ಅತ್ಯಧಿಕ 315.3ಮಿ.ಮೀ., ಕುಂದಾಪುರದಲ್ಲಿ 64.5ಮಿ.ಮೀ. ಹಾಗೂ ಕಾರ್ಕಳದಲ್ಲಿ 256.5ಮಿ.ಮೀ. ಮಳೆಯಾಗಿದೆ.

ಆದರೆ ಉಡುಪಿ ತಾಲೂಕಿನ ಒಂದೆರಡು ಗ್ರಾಮಗಳಲ್ಲಿ 50ಸೆ.ಮೀ.ಗೂ ಅಧಿಕ ಮಳೆ ಬಿದ್ದಿರುವ ವರದಿ ಬಂದಿದೆ ಎಂದು ಜಿಲ್ಲಾಧಿಾರಿ ಕಚೇರಿ ನಿಯಂತ್ರಣ ಕೊಠಡಿ ತಿಳಿಸಿದೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆಯ ಸ್ವರ್ಣ ನದಿ ಪ್ರವಾಹದಿಂದ 13 ಮನೆಗಳ ಸದಸ್ಯರನ್ನು ಸ್ಥಳಾಂತರಿಸಿದರೆ, ಶಾಂಭವಿ ನದಿಯ ನೆರೆಯಿಂದ ಇನ್ನಾ ಗ್ರಾಮದ 9 ಕುಟುಂಬಗಳನ್ನು, ಪಾಪನಾಶಿನಿ ನದಿ ಅಧಿಕ ಹರಿವಿನಿಂದ ಸೂಡ ಗ್ರಾಮದ ಎರಡು ಕುಟುಂಬ, ಬೋಳ ಗ್ರಾಮದ ಒಂದು ಕುಟುಂಬವನ್ನು ಸ್ಥಳಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News