ಎಸ್ ಡಿ ಪಿ ಐ ಹಳೆಯಂಗಡಿ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ

Update: 2020-09-20 17:51 GMT

ಹಳೆಯಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಳೆಯಂಗಡಿ ವಲಯದ ವತಿಯಿಂದ ಸಂತಕಟ್ಟೆ ಮಸೀದಿ ಬಳಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ವನ್ನು ಸಂತಕಟ್ಟೆ ಮಸೀದಿ ಗುರುಗಳು ಆಯುಷ್ಮಾನ್ ಕಾರ್ಡ್ ವಿತರಿಸುವ ಮುಖಾಂತರ ಉದ್ಘಾಟಿಸಿದರು.

ವೇದಿಕೆಯಲ್ಲಿ ಪಿ.ಎಫ್.ಐ. ಮುಲ್ಕಿ ಡಿವಿಜನ್ ಅಧ್ಯಕ್ಷರಾದ ಅಬೂಬಕ್ಕರ್ ಮುಲ್ಕಿ, ಮುಬೀನ್ ಕೊಲ್ನಾಡ್, ಅಬೂಬಕ್ಕರ್ ಕುಲಾಯಿ,ಎಸ್.ಡಿ.ಪಿ.ಐ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಉಪಾಧ್ಯಕ್ಷ ಇಕ್ಬಾಲ್ ಎಮ್.ಎ, ಎಸ್.ಡಿ.ಟಿ.ಯು ಮುಲ್ಕಿ ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷ ಶರೀಫ್ ಕೊಲ್ನಾಡು, ಕಾರ್ಯದರ್ಶಿ ಹಾರಿಸ್ ನವರಂಗ್, ಪಿ.ಎಫ್.ಐ ಹಳೆಯಂಗಡಿ ಹಳೆಯಂಗಡಿ ಏರಿಯಾ ಅಧ್ಯಕ್ಷರಾದ ಇಫ್ತಿಕಾರ್ ಸಾಗ್, ಎಸ್.ಡಿ.ಪಿ.ಐ ಕದಿಕೆ ಬ್ರಾಂಚ್ ಅಧ್ಯಕ್ಷರಾದ ನಝೀರ್ ಸಂತೆಕಟ್ಟೆ ಎಸ್.ಡಿ.ಪಿ.ಐ ಸಾಗ್ ಬ್ರಾಂಚ್  ಸದಸ್ಯರಾದ ಇಕ್ಬಾಲ್ ಮೋನು ಸಾಗ್, ಬದ್ರುದ್ದೀನ್ ಸಾಗ್, ಇಮ್ರಾನ್ ಸಾಗ್, ಮುಂತಾದವರು ಉಪಸ್ಥಿತರಿದ್ದರು.

ಎಸ್.ಡಿ.ಟಿ.ಯು. ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಕಾರ್ಯದರ್ಶಿಯಾದ ಹಾರಿಸ್ ನವರಂಗ್ ಮಾತನಾಡಿ ಸಾರ್ವಜನಿಕರಿಗೆ ಪ್ರಸ್ತುತ ಅವಶ್ಯಕ ವಾಗಿರುವ ಈ ಕಾರ್ಯಕ್ರಮ ಸಂಘಟಿಸಿದ ಎಸ್.ಡಿ.ಪಿ.ಐ ಸದಸ್ಯರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ನಂತರ ಅಬೂಬಕ್ಕರ್ ಕುಲಾಯಿ ಮಾತನಾಡಿ ಎಸ್.ಡಿ.ಪಿ.ಐ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವೆಯ ಬಗ್ಗೆ ಹಾಗೂ ಆಯುಷ್ಮಾನ್ ಕಾರ್ಡ್ ನ ಅನುಕೂಲತೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮೊಹ್ಸಿನ್ ಕದಿಕೆ, ಸ್ವಾಲಿಹ್ ಸಾಗ್, ಇಕ್ಬಾಲ್ ಸಾಗ್, ಸಿದ್ದೀಕ್  ಕದಿಕೆ, ಶೊಹೈಬ್ ಸಂತೆಕಟ್ಟೆ, ತೌಸೀಪ್ ಕದಿಕೆ, ಮುಸ್ತಾಕ್ ಕದಿಕೆ, ಶಾಮಿಲ್ ಸಾಗ್, ಆರೀಪ್ ಕದಿಕೆ, ಆಸೀಫ್ ಇಂದಿರಾನಗರ, ಮುಮ್ತಾಜ್ ಇಂದಿರಾನಗರ, ನೂರುದ್ದೀನ್ ಕದಿಕೆ ಮುಂತಾದವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ವನ್ನು ಸಿದ್ದೀಕ್ ಕದಿಕೆ ನಿರೂಪಿಸಿ ವಂದಿಸಿದರು.

ಸುಮಾರು 300ಕ್ಕೂ ಹೆಚ್ಚು ಮಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು ಎಂದು ಸಂಘಟಕರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News