ಕೊರೋನ ತಂದ ಆರ್ಥಿಕ ಸಂಕಷ್ಟ: ಮಾಲ್ಡೀವ್ಸ್‌ಗೆ ಭಾರತದಿಂದ 250 ಮಿಲಿಯ ಡಾಲರ್ ನೆರವು

Update: 2020-09-20 18:01 GMT

 ಮಾಲೆ,ಸೆ.20: ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಭಾರತವು 250 ದಶಲಕ್ಷ ಡಾಲರ್ ಆರ್ಥಿಕ ನೆರವು ನೀಡಿರುವುದಾಗಿ , ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯು ರವಿವಾರ ತಿಳಿಸಿದೆ.

   ಮಾಲ್ಡೀವ್ಸ್ ಕಠಿಣವಾದ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಅದರಿಂದ ಹೊರಬರಲು ನೆರವಾಗುವಂತೆ ಅಧ್ಯಕ್ಷ ಇಬ್ರಾಹೀಂ ಮುಹಮ್ಮದ್ ಸ್ವಾಲಿಹ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಅತ್ಯಂತ ಅನುಕೂಲಕರವಾದ ಕರಾರುಗಳೊಂದಿಗೆ ಈ ಆರ್ಥಿಕ ನೆರವನ್ನು ನೀಡಲಾಗಿದೆಯೆಂದು ಭಾರತೀಯ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ.

 ರವಿವಾರ ಮಾಲೆಯಲ್ಲಿ ಮಾಲ್ದೀವ್ಸ್ ವಿದೇಶಾಂಗ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. ಮಾಲ್ದೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್, ವಿತ್ತ ಸಚಿವ ಇಬ್ರಾಹೀಂ ಅಮೀರ್, ಭಾರತದ ಹೈಕಮಿಶನರ್ ಸಂಜಯ್ ಸುಧೀರ್ ಹಾಗೂ ಮಾಲೆಯಲ್ಲಿನ ಭಾರತೀಯ ಸ್ಟೇಟ್‌ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಮಿಶ್ರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News