ಅಲ್-ಅಕ್ಸಾ ಸಂಕೀರ್ಣದೊಳಕ್ಕೆ ನುಗ್ಗಿದ ಇಸ್ರೇಲಿಗರ ಗುಂಪು

Update: 2020-09-20 18:16 GMT

ಹೊಸದಿಲ್ಲಿ: ಜೂಯಿಷ್ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಇಸ್ರೇಲಿಗರ ಗುಂಪೊಂದು ಜೆರುಸಲೆಂನ ಅಲ್-ಅಕ್ಸಾ ಸಂಕೀರ್ಣದೊಳಕ್ಕೆ ನುಗ್ಗಿರುವ ಘಟನೆ ನಡೆದಿದೆ.

ಇಸ್ರೇಲಿ ಪೊಲೀಸ್ ಬೆಂಬಲಿತ 76 ಇಸ್ರೇಲಿಗರು ಅಲ್-ಅಕ್ಸಾ ಸಂಕೀರ್ಣದೊಳಕ್ಕೆ ನುಗ್ಗಿದ್ದಾರೆ ಎಂದು ಜೆರುಸಲೇಂ ಅವ್ಕಾಫ್ ಇಲಾಖೆ ಮಾಹಿತಿ ನೀಡಿದೆ.

ಹೊಸ ವರ್ಷದ ಸಂಭ್ರಮಾಚರಣೆಯನ್ನು ಅಲ್ ಅಕ್ಸಾ ಸಂಕೀರ್ಣದಲ್ಲಿ ನಡೆಸುವಂತೆ ಇವರಿಗೆ ಕೆಲ ದಿನಗಳ ಹಿಂದಷ್ಟೆ ಬಲಪಂಥೀಯ ಯಹೂದಿಗಳು ಕರೆ ನೀಡಿದ್ದರು.

ಶನಿವಾರ ಅಲ್-ಅಕ್ಸಾ ಸಂಕೀರ್ಣದೊಳಗೆ ಇಸ್ರೇಲಿಯೊಬ್ಬ ಕಹಳೆಯನ್ನು ಊದಲು ಯತ್ನಿಸಿದ್ದ. ಈ ಸಂದರ್ಭ ಭದ್ರತಾ ಸಿಬ್ಬಂದಿ ಆತನನ್ನು ಹೊರದಬ್ಬಿದ್ದರು.

ಅಲ್-ಅಕ್ಸಾ ಮುಸ್ಲಿಮರಿಗೆ ವಿಶ್ವದ ಮೂರನೇ ಪವಿತ್ರ ಸ್ಥಳವಾಗಿದೆ. ಯಹೂದಿಗಳು ಅಲ್-ಅಕ್ಸಾವನ್ನು ‘ಟೆಂಪಲ್ ಮೌಂಟ್’ ಎನ್ನುತ್ತಿದ್ದು, ಪ್ರಾಚೀನ ಕಾಲದಲ್ಲಿ ಎರಡು ಯಹೂದಿ ದೇವಾಲಯಗಳಿದ್ದ ಜಾಗ ಎಂದು ವಾದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News