ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ನೀತಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2020-09-21 08:33 GMT

ಮಂಗಳೂರು, ಸೆ.21: ಕದ್ರಿ ಪಾರ್ಕ್ ರಸ್ತೆ ಕಾಮಗಾರಿ ವಿಳಂಬ ನೀತಿಯನ್ನು ಖಂಡಿಸಿ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಕದ್ರಿ ಸರ್ಕ್ಯೂಟ್‌ಹೌಸ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜೆ. ಆರ್. ಲೋಬೊ, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 4 ಕೋ.ರೂ. ವೆಚ್ಚದಲ್ಲಿ ಅಂದಾಜು ಮಾಡಿದ್ದ ಈ ಯೋಜನೆಗೆ ಈಗ 12 ಕೋ.ರೂ. ನಿಗದಿ ಮಾಡಲಾಗಿದೆ. ಈ ಮೂಲಕ ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಗೀತ ಕಾರಂಜಿ, ಪುಟಾಣಿ ರೈಲು ಸೇರಿದಂತೆ ಹಲವು ಆಯಾಮಗಳಲ್ಲಿ ಪಾರ್ಕ್ ಅಭಿವೃದ್ಧಿಪಡಿಸಬೇಕಾಗಿತ್ತು. ಆದರೆ, ಕಾಂಗ್ರೆಸ್ ಸರಕಾರದ ಕಾಲದಲ್ಲಿ ಅನುಮೋದನೆಯಾದ ಯೋಜನೆಯನ್ನು ಪ್ರಸಕ್ತ ಬಿಜೆಪಿ ಆಡಳಿತವು ಅತ್ಯಂತ ಕೆಟ್ಟದಾಗಿ ಕಾಮಗಾರಿ ನಡೆಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮಹಾಬಲ ಮಾರ್ಲ, ಅಬ್ದುಲ್ ಸಲೀಂ, ವಿಶ್ವಾಸ್ ದಾಸ್, ಟಿ. ಕೆ. ಸುಧೀರ್, ನೀರಜ್ ಪಾಲ್, ಶುಭೋದಯ ಆಳ್ವ, ಮೋಹನ್ ಶೆಟ್ಟಿ, ಅಪ್ಪಿ, ರಮಾನಂದ ಪೂಜಾರಿ, ಸುರೇಶ್ ಶೆಟ್ಟಿ, ಜಯರಾಜ್, ಮಂಜುಳಾ ನಾಯಕ್, ಪ್ರೇಮ್ ಬಲ್ಲಾಳ್‌ಬಾಗ್, ಪ್ರದೀಪ್ ಬೇಕಲ್, ಮಂಜುಳಾ ನಾಯಕ್, ಮಮತಾ ಶೆಟ್ಟಿ, ಶಾಂತಲ ಗಟ್ಟಿ, ಡೆನಿಸ್ ಡಿಸಿಲ್ವ, ರಕ್ಷಿತ್ ಸಾಲ್ಯಾನ್, ಶಂಸುದ್ದೀನ್, ಟಿ.ಸಿ.ಗಣೇಶ್, ಕೃಷ್ಣ ಕೋಟ್ಯಾನ್, ಮುದಸ್ಸಿರ್ ಕುದ್ರೋಳಿ, ಉದಯ್ ಕುಂದರ್, ಸಮರ್ಥ ಭಟ್, ಯೋಗೀಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News