ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ನಿಂದ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

Update: 2020-09-21 09:51 GMT

ಮಂಗಳೂರು, ಸೆ.21: ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಬ್ಲಡ್ ಸೈಬೋ ಇದರ 186ನೇ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಪಾವೂರು ಪಂಚಾಯತ್ ಬಳಿ ಇರುವ ಮಲಾರ್ ಸಮುದಾಯ ಭವನ ದಲ್ಲಿ ಜರುಗಿತು.

ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ಶಿಬಿರವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬ್ಲಡ್ ಸೈಬೋ ಚೇರ್ಮನ್ ತೌಸೀಫ್ ಸಅದಿ ಹರೇಕಳ, ಜಿಲ್ಲಾದ್ಯಂತ ರಕ್ತದಾನ ಶಿಬಿರ ನಡೆಸಿ ಒಂದೇ ದಿನದಲ್ಲಿ ಐನೂರಕ್ಕೂ ಮಿಕ್ಕ ಯುನಿಟ್ ರಕ್ತ ಸಂಗ್ರಹಿಸಿ ದಾಖಲೆಮಾಡಿದೆ. ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದರು.

ಕೊಣಾಜೆ ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಪಜೀರ್ ಅಧ್ಯಕ್ಷತೆ ವಹಿಸಿದ್ದರು.  ಬದ್ರುದ್ದೀನ್ ಸಖಾಫಿ ದುಆಗೈದರು.

ಮುಖ್ಯ ಅತಿಥಿಗಳಾಗಿ ಶಾಸಕ ಯು.ಟಿ ಖಾದರ್, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಜಿಲ್ಲಾ ಬ್ಲಡ್ ಸೈಬೋ  ಕನ್ವೀನರ್ ಕರೀಂ ಕದ್ಕಾರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಫಿರೋಝ್, ಮುಡಿಪು ಡಿವಿಷನ್ ಕಾರ್ಯದರ್ಶಿ ನೌಫಲ್ ಫರೀದ್ ನಗರ, ಅಬೂ ಸ್ವಾಲಿಹ್, ಎಸ್.ಎಂ.ಎ. ಅಧ್ಯಕ್ಷ ರಝಾಕ್ ಹಾಜಿ, ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಮುನೀರ್ ಬೈತಾರ್, ಕೋಶಾಧಿಕಾರಿ ಫೈಝಲ್, ಎಸ್.ವೈ.ಎಸ್. ಹರೇಕಳ ಸೆಂಟರ್ ಕಾರ್ಯದರ್ಶಿ ಮಜೀದ್ ಫರೀದ್ ನಗರ, ಎಂ.ಪಿ.ಹಸನ್, ಬಶೀರ್ ಮಲಾರ್, ಎಂ.ಕೆ. ಖಮರುದ್ದೀನ್, ರಿಯಾಝ್ ಗಾಡಿಗದ್ದೆ, ಎಂ.ಕೆ.ಫಾರೂಖ್, ತಸ್ಲೀಂ ನಡುಗುಡ್ಡೆ ಮತ್ತಿತರು ಉಪಸ್ಥಿತರಿದ್ದರು.

ಸೆಕ್ಟರ್ ಕಾರ್ಯದರ್ಶಿ ಉಬೈದುಲ್ಲಾಹ್ ಆರ್.ಜಿ. ನಗರ ಸ್ವಾಗತಿಸಿದರು. ನೌಫಲ್ ಮರ್ಝೂಖಿ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ 109 ಯುನಿಟ್ ರಕ್ತ ಸಂಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News