ಇ-ಲೋಕ್ ಅದಾಲತ್‌ನಲ್ಲಿ 1784 ಪ್ರಕರಣಗಳು ಇತ್ಯರ್ಥ

Update: 2020-09-21 14:00 GMT

ಉಡುಪಿ, ಸೆ.21: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸೆ.19ರ ಶನಿವಾರ ಉಡುಪಿ, ಕುಂದಾಪುರ ಮತ್ತು ಕಾರ್ಕಳದ ವಿವಿಧ ನ್ಯಾಯಾಲಯಗಳ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಬೃಹತ್ ಇ-ಲೋಕ್ ಅದಾಲತ್‌ನಲ್ಲಿ ಒಂದೇ ದಿನ ಒಟ್ಟು 1784 ಪ್ರಕರಣ ಗಳನ್ನು ಇತ್ಯರ್ಥಗೊಳಿಸಿದೆ.

ಇವುಗಳಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು-79, ಚೆಕ್ ಅಮಾನ್ಯದ ಪ್ರಕರಣ-74, ಬ್ಯಾಂಕ್-ಹಣ ವಸೂಲಾತಿ ಪ್ರಕರಣ-10, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಶಕರಣದ ಪ್ರಕರಣ-69, ಕಾರ್ಮಿಕ ವಿವಾಧ-1, ಎಂಎಂಆರ್‌ಡಿ ಆ್ಯಕ್ಟ್ ಪ್ರಕರಣ-9, ಸಿವಿಲ್ ಪ್ರಕರಣಗಳು-58, ಇತರ ಕ್ರಿಮಿನಲ್ ಪ್ರಕರಣಗಳು-1483, ವ್ಯಾಜ್ಯಪೂರ್ವ ದಾವೆ-1 ಸೇರಿ ಒಟ್ಟು ಒಟ್ಟು 1784 ಪ್ರಕರಣಗಳು ರಾಜೀ ಮೂಲಕ ವಿಲೇವಾರಿ ಗೊಂಡಿದ್ದು, ಒಟ್ಟು 2,45,82,290 ರೂ. ಪರಿಹಾರ ಮೊತ್ತವನ್ನು ಘೋಷಿಸ ಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News