ಉಡುಪಿ: 233 ಮಂದಿಯಲ್ಲಿ ಕೊರೋನ ಪಾಸಿಟಿವ್, ಕೋವಿಡ್ ಗೆ ನಾಲ್ಕು ಬಲಿ

Update: 2020-09-21 14:31 GMT

ಉಡುಪಿ, ಸೆ.21: ನೋವೆಲ್ ಕೊರೋನ ಸೋಂಕು ಸೋಮವಾರ ಜಿಲ್ಲೆಯ ಇನ್ನೂ 233 ಮಂದಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದಿರುವ ಒಟ್ಟುಪ್ರಕರಣಗಳ ಸಂಖ್ಯೆ 15,624ಕ್ಕೇರಿದೆ. ಅಲ್ಲದೇ ಇಂದು 619 ಮಂದಿಯ ಗಂಟಲುದ್ರವ ಮಾದರಿ ಫಲಿತಾಂಶ ನೆಗೆಟಿವ್ ಬಂದಿವೆ. ಇಂದು ಜಿಲ್ಲೆಯಲ್ಲಿ ನಾಲ್ವರು ಹಿರಿಯ ನಾಗರಿಕರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 233 ಮಂದಿಯಲ್ಲಿ ಉಡುಪಿ ತಾಲೂಕಿನ 111 ಮಂದಿ, ಕುಂದಾಪುರ ತಾಲೂಕಿನ 55 ಹಾಗೂ ಕಾರ್ಕಳ ತಾಲೂಕಿನ 47 ಮಂದಿ ಸೇರಿದ್ದು, ಹೊರಜಿಲ್ಲೆಯಿಂದ ಉಡುಪಿ, ಮಣಿಪಾಲಕ್ಕೆ ಚಿಕಿತ್ಸೆಗೆಂದು ಬಂದ 20 ಮಂದಿಯಲ್ಲೂ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು.

ಇಂದಿನ 233 ಮಂದಿಯಲ್ಲಿ ಮಕ್ಕಳು ಸೇರಿದಂತೆ 143 ಮಂದಿ ಪುರುಷರು ಹಾಗೂ 90 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 54 ಪುರುಷರು ಹಾಗೂ 44 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.

ಪಾಸಿಟಿವ್ ದೃಢಗೊಂಡವರಲ್ಲಿ 140 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 78 ಮಂದಿ ಶೀತಜ್ವರದಿಂದ ಹಾಗೂ ಆರು ಮಂದಿ ಉಸಿರಾಟದ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸದಿಂದ ಮರಳಿದ ಮೂವರು ಹಾಗೂ ವಿದೇಶಿ ಪ್ರವಾಸದಿಂದ ಬಂದ ಒಬ್ಬನಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಐದು ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

278 ಮಂದಿ ಗುಣಮುಖ: ಜಿಲ್ಲೆಯಲ್ಲಿ ಇಂದು ಒಟ್ಟು 278 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ಇವರಲ್ಲಿ 66 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 212 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 14,114ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1366 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 815 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 551 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

792 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಸೋಮವಾರ ಒಟ್ಟು 792 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 738 ಮಂದಿ, ಕೋವಿಡ್ ಸಂಪರ್ಕಿತರು 33 ಮಂದಿ ಇದ್ದರೆ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ 7 ಮಂದಿಯ ಸ್ಯಾಂಪಲ್‌ಗಳು ಸೇರಿವೆ. ಅಲ್ಲದೇ ಹಾಟ್‌ಸ್ಪಾಟ್‌ಗಳಿಂದ ಬಂದ 11 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಪಡೆುಲಾಗಿದೆ ಎಂದು ಡಾ.ಸೂಡ ತಿಳಿಸಿದರು.
 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಸೋಮವಾರ ಒಟ್ಟು 792 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 738 ಮಂದಿ, ಕೋವಿಡ್ ಸಂಪರ್ಕಿತರು 33 ಮಂದಿ ಇದ್ದರೆ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ 7 ಮಂದಿಯ ಸ್ಯಾಂಪಲ್‌ಗಳು ಸೇರಿವೆ. ಅಲ್ಲದೇ ಹಾಟ್‌ಸ್ಪಾಟ್‌ಗಳಿಂದ ಬಂದ 11 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಪಡೆಯಲಾಗಿದೆ ಎಂದು ಡಾ.ಸೂಡ ತಿಳಿಸಿದರು. ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 95,522ಕ್ಕೇರಿದೆ. ಇವುಗಳಲ್ಲಿ ಈವರೆಗೆ 79,779 ನೆಗೆಟಿವ್, 15,624 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 144 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 119 ಸ್ಯಾಂಪಲ್‌ಗಳ ಪರೀಕ್ಷಾವರದಿ ಬರೇಕಿದೆ ಎಂದು ಡಾ.ಸೂಡ ಹೇಳಿದರು.
ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 95,522ಕ್ಕೇರಿದೆ. ಇವುಗಳಲ್ಲಿ ಈವರೆಗೆ 79,779 ನೆಗೆಟಿವ್, 15,624 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 144 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 119 ಸ್ಯಾಂಪಲ್‌ಗಳ ಪರೀಕ್ಷಾವರದಿ ಬರಬೇಕಿದೆ ಎಂದು ಡಾ.ಸೂಡ ಹೇಳಿದರು. ಬಾಕ್ಸ್ ಮಾಡಿ
ಕೊರೋನಕ್ಕೆ ನಾಲ್ವರು ಬಲಿ
ಸೋಮವಾರ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಹಿರಿಯ ನಾಗರಿಕರು ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು. ಉಡುಪಿಯ ಮಹಿಳೆ (70ವರ್ಷ) ಹಾಗೂ ಪುರುಷ (84), ಕಾರ್ಕಳದ ಮಹಿಳೆ (72) ಹಾಗೂ ಕುಂದಾಪುರದ (66) ಮೃತರಲ್ಲಿ ಸೇರಿದ್ದಾರೆ.
ಮಹಿಳೆಯರಿಬ್ಬರೂ ಸೆ.17ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮೃತಪಟ್ಟಿದ್ದರು. ಇಬ್ಬರಲ್ಲೂ ಅಸ್ತಮಾ, ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗಳಿದ್ದು, ಉಸಿರಾಟ ತೊಂದರೆಯಿಂದ ಬಳಲುತಿದ್ದರು. ಇಬ್ಬರೂ ಕೋವಿಡ್‌ಗೆ ಪಾಸಿಟಿವ್ ಆಗಿದ್ದು, ಚಿಕಿತ್ಸೆ ಪ್ರಾರಂಭಿ  ುವ ಮೊದಲೇ ಸಾವನ್ನಪ್ಪಿದ್ದರು
66 ಮತ್ತು 84ರ ಹರೆಯದ ಪುರುಷರು ಸಹ ಅನ್ಯ ಸಮಸ್ಯೆಗಳಿಂದ ಬಳಲುತಿದ್ದು, ಚಿಕಿತ್ಸೆಗೆ ದಾಖಲಾಗಿ ಕೊರೋನ ಸೋಂಕು ಪತ್ತೆಯಾಗಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News