×
Ad

ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ: ನಗರಕ್ಕೆ ನೀರು ಪೂರೈಕೆ ಆರಂಭ

Update: 2020-09-21 20:48 IST

ಹಿರಿಯಡ್ಕ, ಸೆ.21: ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂ ಪ್ರದೇಶದಲ್ಲಿ ಸ್ವರ್ಣ ನದಿಯ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7:45ರಿಂದ ಪಂಪಿಂಗ್ ನಡೆಸಿ, ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಆರಂಭಿಸಲಾಗಿದೆ.

ಭಾರೀ ಮಳೆಯಿಂದ ನದಿ ನೀರು ಉಕ್ಕಿ ಹರಿದ ಪರಿಣಾಮ ಸೆ.20ರಂದು ಬೆಳಗಿನ ಜಾವ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ 10.5 ಮೀಟರ್ ಏರಿಕೆ ಯಾಗಿತ್ತು. ಇದರಿಂದ ಅಲ್ಲೇ ಸಮೀಪ 9.5 ಮೀಟರ್ ಎತ್ತರದಲ್ಲಿರುವ ಪಂಪ್ ಹೌಸ್‌ಗೂ ನೀರು ನುಗಿತ್ತು. ಈ ಹಿನ್ನೆಲೆಯಲ್ಲಿ ಪಂಪಿಂಗ್ ಕಾರ್ಯ ವನ್ನು ನಿಲ್ಲಿಸಿ, ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ಇಂದು ಬೆಳಗಿನ ಜಾವ ಬಜೆಯಲ್ಲಿ ನೀರಿನ ಮಟ್ಟ 9 ಮೀಟರ್‌ಗೆ ಇಳಿದ ಪರಿಣಾಮ, ಮೆಸ್ಕಾಂ ಅಧಿಕಾರಿಗಳನ್ನು ಕರೆಸಿ, ಪಂಪಿಂಗ್ ಬಗ್ಗೆ ಪರಿಶೀಲನೆ ನಡೆಸಲಾಯಿತು. ಬಳಿಕ ಪಂಪಿಂಗ್ ಕಾರ್ಯವನ್ನು ಆರಂಭಿಸಲಾಯಿತು. ಸದ್ಯ ಬಜೆಯಲ್ಲಿ ನೀರಿನ ಮಟ್ಟ 7.5 ಮೀಟರ್ ಇದೆ. ಇದೀಗ ಮೂರು ವಲಯ ಗಳನ್ನಾಗಿ ಮಾಡಿ ನಗರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಉಡುಪಿ ನಗರಸಭೆಯ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News