ಟ್ಯಾಲೆಂಟ್‌ನಿಂದ ‘ಉಮ್ಮಗೊರು ಅಗ’ ಯೋಜನೆ ಅನುಷ್ಠಾನಕ್ಕೆ ಸಮಿತಿ ರಚನೆ

Update: 2020-09-21 15:23 GMT
ರಶೀದ್ ಹಾಜಿ, ಮುಸ್ತಫಾ ಅಡ್ಡೂರು

ಮಂಗಳೂರು, ಸೆ.21: ‘ನಂಡೆ ಪೆಂಙಳ್’ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದೀಗ ‘ಉಮ್ಮಗೊರು ಅಗ’ ಎಂಬ ನೂತನ ಯೋಜನೆಯನ್ನು ರೂಪಿಸಿದ್ದು, ಅದರ ಅನುಷ್ಠಾನಕ್ಕೆ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ದ.ಕ. ಜಿಲ್ಲೆಯ ಅಸಂಖ್ಯಾತ ಬಡ ಕುಟುಂಬಗಳ ಮನೆಗಳು ಶಿಥಿಲಾವಸ್ಥೆ ತಲುಪಿದ್ದು, ಬೀಳುವ ಪರಿಸ್ಥಿತಿಯಲ್ಲಿವೆ. ಇನ್ನು ಕೆಲವರಿಗೆ ಸ್ವಂತ ಜಾಗ ಇದ್ದರೂ ಟೆಂಟ್ ಅಥವಾ ಸಣ್ಣ ಗುಡಿಸಲಿನಲ್ಲಿ ಬದುಕುವ ದುಃಸ್ಥಿತಿಯಲ್ಲಿದ್ದಾರೆ. ಅಂಥವರನ್ನು ಸರ್ವೇ ನಡೆಸಿ ಆದ್ಯತೆಯ ಮೇರೆಗೆ ಹೊಸ ಮನೆ ನಿರ್ಮಾಣ ಅಥವಾ ಮನೆ ದುರಸ್ತಿ ನಡೆಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಯನ್ನು ಅತ್ಯಂತ ಸುಸೂತ್ರವಾಗಿ ನಡೆಸಲು ಟ್ಯಾಲೆಂಟ್ ಸಾರಥ್ಯದಲ್ಲಿ ಹೊಸ ಸಮಿತಿಯೊಂದನ್ನು ರಚಿಸಲಾಗಿದೆ.

ಸಮಿತಿಯ ಗೌರವಾಧ್ಯಕ್ಷರಾಗಿ ಎಸ್.ಎಂ. ರಶೀದ್ ಹಾಜಿ, ಮುಖ್ಯ ಸಲಹೆಗಾರರಾಗಿ ಅಝಾದ್ ಹಾರ್ಡ್‌ವೇರ್‌ನ ಮನ್ಸೂರ್ ಅಹ್ಮದ್, ಡೆಕ್ಕನ್ ಪ್ಲಾಸ್ಟ್‌ನ ಅಸ್ಗರ್ ಹಾಜಿ, ಅಧ್ಯಕ್ಷರಾಗಿ ಮುಸ್ತಫಾ ಇಂಜಿನಿಯರ್ ಅಡ್ಡೂರು, ಉಪಾಧ್ಯಕ್ಷರಾಗಿ ಕಿಂಗ್ಸ್ ಗ್ರಾನೈಟ್‌ನ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಮಾಸ್ಟರ್, ಜೊತೆ ಕಾರ್ಯದರ್ಶಿಯಾಗಿ ಭಾರತ್ ಕನ್‌ಸ್ಟ್ರಕ್ಷನ್ ಮೂಡುಬಿದಿರೆಯ ಎಸ್.ಎಂ. ಮುಸ್ತಫಾ, ಕೋಶಾಧಿಕಾರಿಯಾಗಿ ಅಬ್ದುಲ್ ರವೂಫ್ ಪುತ್ತಿಗೆ, ಸದಸ್ಯರಾಗಿ ಸಾಗರ್ ಫ್ರೂಟ್ಸ್‌ನ ಎಸ್.ಎಫ್. ಇಸಾಕ್ ಹಾಜಿ, ಹಾರಿಸ್ ಮೆರೈನ್, ರಿಯಾಝ್ ಅಹ್ಮದ್ ಕಣ್ಣೂರು, ನೌಷಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ಹಮೀದ್ ಕಣ್ಣೂರು ನೇಮಕಗೊಂಡಿದ್ದಾರೆ.

ಟ್ಯಾಲೆಂಟ್ ಸಾರಥ್ಯದಲ್ಲಿ ನಡೆಯುತ್ತಿರುವ ‘ನಂಡೆ ಪೆಂಙಳ್’ ಅಭಿಯಾನದಡಿ ಈಗಾಗಲೇ 293 ‘ಸಹೋದರಿಯರ’ ಮದುವೆಗೆ ಸಹಕರಿಸಲಾ ಗಿದೆ. ಅದೇ ರೀತಿ ‘ಉಮ್ಮಗೊರು ಅಗ’ ಯೋಜನೆ ಯಶಸ್ವಿಯಾಗಲು ಎಲ್ಲರೂ ಸಹಕರಿಸುವಂತೆ ಯೋಜನೆಯ ಗೌರವಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News