ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ ಎಸ್ಸೆಸ್ಸೆಫ್ ಹೆಲ್ಪ್ ‌ಡೆಸ್ಕ್

Update: 2020-09-21 15:30 GMT

ಉಡುಪಿ, ಸೆ.21: ಉಡುಪಿಯಲ್ಲಿ ರವಿವಾರ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಉಡುಪಿ ಡಿವಿಷನ್ ಎಸ್ಸೆಸ್ಸೆಫ್ ಹೆಲ್ಪ್ಡೆಸ್ಕ್ ತಂಡವು ಜನರ ಹಾಗೂ ಪ್ರಾಣಿಗಳ ಜೀವ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಕೈಜೋಡಿಸಿ ಮಾನವಿಯ ಸೇವೆ ಮಾಡಿದೆ.

ಹೇರೂರು, ಕೆ.ಜಿ.ರೋಡ್, ಕೊಳಲಗಿರಿ, ಮಣಿಪುರ, ಕಟಪಾಡಿ ಕುರ್ಕಾಲು, ಹೂಡೆ ಹಾಗೂ ಉಪ್ಪೂರು ಸೇರಿದಂತೆ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಲ್ಫ್ ಡೆಸ್ಕ್ ಕಾರ್ಯಾಚರಣೆ ನಡೆಸಿದೆ. ಅದೇ ರೀತಿ ಉಪ್ಪೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆ ನೀರು ತೆರವುಗೊಳಿಸುವ ಮೂಲಕ ಸುಗಮ ವಾಹನ ಸಂಚಾರ ಅನುವು ಮಾಡಿಕೊಡಲಾಯಿತು.

ಉಡುಪಿ ಡಿವಿಷನ್ ಎಸ್ಸೆಸ್ಸೆಫ್ ಡಿಫೆನ್ಸ್ ಪೋರ್ಸ್ ಹೆಲ್ಪ್ಡೆಸ್ಕ್ ತಂಡದ ಅಧ್ಯಕ್ಷ ಮಜೀದ್ ಕಟಪಾಡಿ ನೇತೃತ್ವದಲ್ಲಿ ಸಂಚಾಲಕ ಆಸೀಫ್ ಸರಕಾರಿ ಗುಡ್ಡೆ, ಕಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಸಿದ್ದೀಕ್ ಸಂತೋಷ್ ನಗರ, ನಾಸೀರ್ ಭದ್ರಗಿರಿ, ಇಮ್ತಿಯಾಜ್ ಹೊನ್ನಾಳ, ಅಲ್ತಾಫ್ ಮಲ್ಪೆ, ನಝೀರ್ ಸಾಸ್ತಾನ, ಇಬ್ರಾಹಿಂ ರಂಗನಕೆರೆ, ಶಂಶುದ್ದೀನ್, ಸುಲೈಮಾನ್, ಪಾರೂಕ್, ಮುತ್ತಲಿಬ್ ಬಾರ್ಕೂರು, ಇಮ್ರಾನ್ ಹೊನ್ನಾಳ, ಸಲ್ಮಾನ್ ಮಣಿಪುರ, ಇರ್ಷಾದ್ ಮಣಿಪುರ, ರಫೀಕ್ ಕಟಪಾಡಿ, ಶಮೀರ್ ಮಣಿಪುರ, ಸಫ್ವಾನ ಮಣಿಪುರ, ಸಿಹಾನ್ ಹೂಡೆ, ಫಾಯಿಝ್ ಹೂಡೆ ಈ ಸೇವೆಯಲ್ಲಿ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಹೆಲ್ಪ್ಡೆಸ್ಕ್ ಅಧ್ಯಕ್ಷ ಮಜೀದ್ ಹನೀಪಿ ಕಾಪು ಹಾಗೂ ಸುನ್ನೀ ಹೆಲ್ಪ್ಡೆಸ್ಕ್ನ ನಾಯಕರಾದ ಬಶೀರ್ ಉಸ್ತಾದ್ ಮಜೂರು ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News