ಕಾರವಾರ ಬಳಿ ಮಲ್ಪೆ ಬೋಟು ಮುಳುಗಡೆ: 8 ಮೀನುಗಾರರ ರಕ್ಷಣೆ

Update: 2020-09-21 16:04 GMT

ಉಡುಪಿ, ಸೆ.21: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ವೊಂದು ಕಾರವಾರ ಬಂದರು ಸಮೀಪ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.ಉದ್ಯಾವರದ ಜಾಹ್ನವಿ ಎಸ್.ಕೋಟ್ಯಾನ್ ಎಂಬವರ ಮಾಲಕತ್ವದ ಬ್ರಹ್ಮರಿ ಹೆಸರಿನ ಬೋಟು ಸೆ.14 ರಂದು ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದು, ಸೆ.19ರ ತಡರಾತ್ರಿ ಭಾರಿ ಮಳೆಯಿಂದಾಗಿ ಬೃಹತ್ ಗಾತ್ರದ ಅಲೆಗಳು ಬೋಟ್‌ಗೆ ಅಪ್ಪಳಿಸಿತ್ತೆನ್ನಲಾಗಿದೆ.

ಇದರಿಂದ ಸಮುದ್ರದ ಮಧ್ಯೆ ಬೋಟ್ ಮುಳುಗಡೆಯಾಗಿದೆ. ಮಾಹಿತಿ ತಿಳಿದ ಅಲ್ಲೇ ಸಮೀಪದಲ್ಲಿದ್ದ ರೋನಿಕ್ ಬೋಟಿನ ಮೀನುಗಾರರು ಮುಳುಗು ತ್ತಿದ್ದ ಬೋಟ್‌ನಲ್ಲಿದ್ದ 8 ಮಂದಿ ಮೀನುಗಾರನ್ನು ರಕ್ಷಿಸಿದ್ದಾರೆ. ಬೋಟ್ ಅವಘಡದಿಂದಾಗಿ 65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News