ಕಾಪು ತಾಲ್ಲೂಕು ಅಂಬೇಡ್ಕರ್ ವಾದ ಪುನರ್ ರಚನೆ

Update: 2020-09-21 16:45 GMT

ಕಾಪು : ದಲಿತರು ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ಆ ಮೂಲಕ ಮೊದಲು ತನ್ನನ್ನು ತಾನು ಗೆಲ್ಲಬೇಕು. ಅದಕ್ಕಾಗಿ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ. ದಲಿತರು ಅವರ ದಾರಿಯಲ್ಲೇ ಸಾಗಬೇಕು ಎಂದು ದಲಿತ ಚಿಂತಕರಾದ ನಾರಾಯಣ್ ಮಣೂರ್ ಕರೆ ನೀಡಿದರು.

ಕಾಪು ಉಳಿಯಾರಗೊಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ಕಾಪು ಅಂಬೇಡ್ಕರ್ ವಾದ  ತಾಲೂಕು ಶಾಖೆಯ ಪುನರ್ ರಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ವೈಚಾರಿಕತೆ ನೆಲೆಗಟ್ಟಿನಲ್ಲಿ ಮುಂದೆ ಕೊಂಡುಹೋಗಬೇಕು. ಬಾಬಾ ಸಾಹೇಬರು ದಲಿತರ, ಅಸ್ಪ್ರಶ್ಯರ ಸ್ವಾತಂತ್ರ್ಯಕ್ಕಾಗಿ ಹಾಗೂ ವಿಮೋಚನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ.

ದಲಿತ ಸಮುದಾಯವನ್ನು ದಲಿತ ಮುಖಂಡ ಶ್ಯಾಮರಾಜ್ ಭಿರ್ತಿ ಮಾತನಾಡಿ, ದಲಿತರು ಸಂಘಟಿತರಾಗಬೇಕು ಇಲ್ಲವಾದಲ್ಲಿ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು. ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ತರ್ ಮಾತ ನಾಡಿ, ಸಂಘಟನೆಯ ಮಹತ್ವ, ಹೋರಾಟ ದಲಿತರಿಗೆ ಇರುವ ಸರಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿದರು.

ಕಾಪು ತಾಲೂಕಿನ ನೂತನ ಸಂಚಾಲಕರಾಗಿ ವಿಠಲ್ ಉಚ್ಚಿಲ ಹಾಗೂ ಸಂಘಟನಾ ಸಂಚಾಲಕರಾಗಿ ಶಿವಾನಂದ್ ಪಡುಬಿದ್ರಿ, ರಮೇಶ್ ಕಂಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕರಾದ ಎಸ್.ಎಸ್ ಪ್ರಸಾದ್ ಮಾಸ್ತರ್ ಬಂಟಕಲ್ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.

ಶ್ಯಾಮ್ ಸುಂದರ್ ತೆಕ್ಕಟ್ಟೆ, ಪರಮೇಶ್ವರ್ ಉಪ್ಪೂರ್, ಭಾಸ್ಕರ್ ಮಾಸ್ತರ್ ಉಡುಪಿ, ವಿದ್ಯಾರ್ಥಿ ಒಕ್ಕೂಟದ ರಾಜೇಂದ್ರನಾಥ್, ಶಂಕರ್ ದಾಸ್ ಚೆಂಡ್ಕಳ, ಸುಕೇಶ್ ಪಡುಬಿದ್ರಿ, ವಸಂತಿ ಕಲ್ಲಟ್ಟೆ, ದಿನಕರ್ ಉಚ್ಚಿಲ, ರಾಘವ ಬೆಳ್ಳೆ, ಗೋಪಾಲ್ ಕೃಷ್ಣ ಕುಂದಾಪುರ, ಸೌಮ್ಯ ಕಾಪು ಉಪಸ್ಥಿತರಿ ದ್ದರು. ಸುಕೇಶ್ ಪಡುಬಿದ್ರಿ ಸ್ವಾಗತಿಸಿದರು.  ಕೀರ್ತಿಕುಮಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News