ಜೆಇಇ ಆರ್ಕ್, ಬಿ.ಪ್ಲಾನಿಂಗ್ ರಾಷ್ಟ್ರಮಟ್ಟದ ಪರೀಕ್ಷೆ : ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Update: 2020-09-21 17:01 GMT

ಮೂಡುಬಿದಿರೆ : ಎನ್.ಐ.ಟಿ. ಗಳಲ್ಲಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪ್ರವೇಶಾತಿಗಾಗಿ ಸೆ. 1 ರಂದು ನಡೆದ ರಾಷ್ಟ್ರಮಟ್ಟದ ಜೆ.ಇ.ಇ. ಆರ್ಕ್ ಮತ್ತು ಬಿ.ಪ್ಲಾನಿಂಗ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 52 ವಿದ್ಯಾರ್ಥಿಗಳು 90 ಪರ್ಸಂಟೈಲ್‍ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.

ಜೆ.ಇ.ಇ. ಆರ್ಕ್‍ನಲ್ಲಿ ವಿದ್ಯಾರ್ಥಿಗಳಾದ ಮೊನೇಷ್ ಎಸ್ (99.53),  ಶ್ರುತಿ ವಿನಯ್ ವರ್ನೆಕರ್ (99.31),  ತುಷಾರ್ ಬೀಡೆ (99.02), ಸ್ಪೂರ್ತಿ ಜಿ (98.75),  ಚಂದನ್ ರಾಜೇಂದ್ರ ನರಸಗೌಡ (97.69), ಸಮರ್ಥ್ ವಿರುಪಾಕ್ಷಿ ಅವತಿ (97.30), ನಂದನ ಪಿ (96.40), ಸಂಚಿತ ಮನೋಜ್ ಶೆಟ್ಟಿ (95.77), ಅಭಿಷೇಕ್ ವಿ ಬಿ (95.72),  ರಕ್ಷ ಎಮ್ (95.50)  ಫಲಿತಾಂಶವನ್ನು ಗಳಿಸಿದ್ದಾರೆ ಮತ್ತು ಬಿ ಪ್ಲಾನಿಂಗ್‍ನಲ್ಲಿ ಮೊನೇಷ್ ಎಸ್ (99.09),  ರೋಶನ್ ಕುಮಾರ್ ಯು(98.55),  ನಂದನ ಪಿ (95.53),  ವರ್ದನ್ ಸುರೋಷಿ (95.11) ಫಲಿತಾಂಶವನ್ನು ಗಳಿಸಿದ್ದಾರೆ.

90 ಪರ್ಸಂಟೈಲ್‍ಗಿಂತ ಮೇಲೆ 52 ವಿದ್ಯಾರ್ಥಿಗಳು, 85 ಪರ್ಸಂಟೈಲ್‍ಗಿಂತ ಮೇಲೆ 74 ವಿದ್ಯಾರ್ಥಿಗಳು, 80 ಪರ್ಸಂಟೈಲ್‍ಗಿಂತ ಮೇಲೆ 91 ವಿದ್ಯಾರ್ಥಿಗಳು, 75 ಪರ್ಸಂಟೈಲ್‍ಗಿಂತ ಮೇಲೆ 108 ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರು ಹಾಗೂ ಪ್ರಾಂಶುಪಾಲರಾದ ಪ್ರೊ. ರಮೇಶ್ ಶೆಟ್ಟಿ ಎಚ್ ರವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News