ತೈವಾನ್ ಸ್ವಾತಂತ್ರಕ್ಕೆ ನೀಡುವ ಯಾವುದೇ ಬೆಂಬಲ ವಿಫಲವಾಗಲಿದೆ: ಚೀನಾ

Update: 2020-09-21 17:34 GMT

ಬೀಜಿಂಗ್,ಸೆ.21: ತೈವಾನ್ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಚೀನಾವು, ದ್ವೀಪ ರಾಷ್ಟ್ರದ ಸ್ವಾತಂತ್ರಕ್ಕೆ ಯಾರೇ ಬೆಂಬಲ ನೀಡಿದರೂ ಅದು ವಿಫಲವಾಗಲಿದೆಯೆಂದು ಹೇಳಿದೆ. ತೈವಾನ್‌ಗೆ ಅಮೆರಿಕದ ರಾಜತಾಂತ್ರಿಕ ಭೇಟಿಗಳ ವಿರುದ್ಧವೂ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಅದು ಬೆದರಿಕೆ ಹಾಕಿದೆ.

 ಬೀಜಿಂಗ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ವೆನ್‌ಬಿನ್ ಅವರು ಮಾತನಾಡಿ, ಅಮೆರಿಕದ ಪ್ರತಿನಿಧಿಯ ತೈವಾನ್ ಭೇಟಿಯು , ರಾಜಕೀಯ ಪ್ರಚೋದನಕಾರಿ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಈ ನಡೆಗೆ ಚೀನಾ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಲಿದೆಯೆಂದು ಅವರು ಬೆದರಿಕೆ ಹಾಕಿದರು.

 ತೈವಾನ್‌ಗೆ ಸಂಬಂಧಿಸಿ ಅಮೆರಿಕದ ಕೃತ್ಯಗಳು ಚೀನಾ-ಅಮೆರಿಕದ  ನಡುವಿನ ಸಹಕಾರಕ್ಕೆ ಹಾನಿಯುಂಟು ಮಾಡಲಿವೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.

1949ರಲ್ಲಿ ನಾಗರಿಕ ಯುದ್ಧವು ಕೊನೆಗೊಂಡ ಬಳಿಕ ತೈವಾನ್ ಚೀನಾದಿಂದ ಬೇರ್ಪಟ್ಟು ಪ್ರತ್ಯೇಕ ಆಳ್ವಿಕೆಯನ್ನು ಹೊಂದಿದೆ. ಆದರೆ ಚೀನಾ ಮಾತ್ರ ತೈವಾನ್ ತನ್ನೊಂದಿಗೆ ಏಕೀಕರಣಗೊಳ್ಳಬೇಕಾದ ಪ್ರಾಂತವೆಂದು ವಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News