ಎಸ್ಡಿಪಿಐ ಬಜ್ಪೆ ಗ್ರಾಮ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ

Update: 2020-09-21 17:51 GMT

ಬಜ್ಪೆ : ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಜ್ಪೆ ಗ್ರಾಮ ಸಮಿತಿಯ ವತಿಯಿಂದ ಕಿನ್ನಿಪದವು ರೋಯಲ್ ಹೌಸಿನಲ್ಲಿ ಇಂದು ಆಯುಷ್ಮಾನ್ ಕಾರ್ಡ್ ನೊಂದಾವಣೆ ಅಭಿಯಾನ ನಡೆಯಿತು.

ಕೊವಿಡ್ ಕಾರಣದಿಂದಾಗಿ ಖಾಸಗಿ ಸೈಬರ್ ಗಳಲ್ಲಿ ನಿಯಮಿತ ಜನರಿಗೆ ಮಾತ್ರ ಆಯುಷ್ಮಾನ್ ಕಾರ್ಡ್ ಮಾಡುವ ಅವಕಾಶವಿದ್ದ ಕಾರಣ ಜನರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಈ ಸೌಲಭ್ಯ ಒದಗಿಸಬೇಕೆಂದು ಎಸ್ಡಿಪಿಐ ಬಜ್ಪೆ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಬಜ್ಪೆ ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಬಜ್ಪೆ ತಿಳಿಸಿದ್ದರು.

ಬಜ್ಪೆ ಪಂಚಾಯಿತ್ ಹಾಗೂ ಆಸುಪಾಸಿನ 350 ರಷ್ಟು ನಿವಾಸಿಗಳು ಈ ಅಭಿಯಾನದ ಪ್ರಯೋಜನೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಎಸ್ಡಿಪಿಐ ಬಜ್ಪೆ ಗ್ರಾಮ ಸಮಿತಿಯ ಅಧ್ಯಕ್ಷ  ನಝೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಅಧ್ಯಕ್ಷ  ಹಸೈನಾರ್ ಮತ್ತು  ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ  ಸದಸ್ಯ  ಇಸ್ಮಾಯಿಲ್ ಎಂಜಿನಿಯರ್  ಹಾಗೂ ಎಸ್ಡಿಪಿಐ ಪಕ್ಷದ ಕಾರ್ಯಕರ್ತರಾದ ರಫೀಕ್  ಶಾಂತಿಗುಡ್ದೆ, ಇರ್ಷಾದ್, ಮನ್ಸೂರ್, ಅನ್ವರ್, ಇಮ್ರಾನ್, ಪರ್ವೀಝ್, ರಿಯಾಝ್  ಹಾಗೂ ಇತರರು ಉಪಸ್ಥಿತರಿದ್ದರು.

ಇಲ್ಯಾಸ್ ಬಜಪೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News