3.10 ಲಕ್ಷದ ಗಡಿ ದಾಟಿದ ಜಾಗತಿಕ ಕೊರೋನ ಸೋಂಕಿತರ ಸಂಖ್ಯೆ

Update: 2020-09-21 18:09 GMT

ವಾಶಿಂಗ್ಟನ್,ಸೆ.21: ಜಗತ್ತಿನಾದ್ಯಂತ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ ಸೋಮವಾರ 3.10 ಕೋಟಿಯ ಗಡಿಯನ್ನು ದಾಟಿದೆ ಹಾಗೂ ಸಾವಿನ ಸಂಖ್ಯೆ 9.60 ಲಕ್ಷಕ್ಕೆ ಏರಿಕೆಯಾಗಿದೆ.

   ಕೊರೋನ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆಯು ಸೋಮವಾರ 3,10,4033ಕ್ಕೆ ತಲುಪಿದೆ ಹಾಗೂ ಸಾವಿನ ಸಂಖ್ಯೆಯು 9.60,826ಕ್ಕೇರಿದೆಯೆಂದು ಜಾನ್‌ಹಾಪ್‌ಕಿನ್ಸ್ ವಿವಿಯ ಸಿಸ್ಟಮ್ಸ್ ಸಯನ್ಸ್ ಆ್ಯಂಡ್ ಎಂಜಿನಿಯರಿಂಗ್ (ಸಿಎಸ್‌ಇಇ) ತನ್ನ ದೈನಂದಿನ ಜಾಗತಿಕ ಕೋವಿಡ್-19 ಪ್ರಕರಣಗಳ ವರದಿಯಲ್ಲಿ ತಿಳಿಸಿದೆ.

ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕವು ಜಗತ್ತಿನಲ್ಲೇ ಅತ್ಯಧಿಕವಾಗಿ ಬಾಧಿತವಾದ ದೇಶವಾಗಿದ್ದು, ಅಲ್ಲಿ ಈವರೆಗೆ 68,05, 512 ಮಂದಿಗೆ ಸೋಂಕು ತಗಲಿದೆ ಹಾಗೂ 1,99,512 ಮಂದಿ ಸಾವನ್ನಪ್ಪಿದ್ದಾರೆಂದು ಸಿಎಸ್‌ಎಸ್‌ಇನ ವರದಿ ತಿಳಿಸಿದೆ.

  ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತದಲ್ಲಿ ಸೋಮವಾರದವರೆಗೆ ಒಟ್ಟು 54,87,580 ಪ್ರಕರಣಗಳು ವರದಿಯಾಗಿವೆ ಹಾಗೂ ದೇಶದ ಒಟ್ಟು ಸಾವಿನ ಸಂಖ್ಯೆಯು 87,882ಕ್ಕೇರಿದೆ ಎಂದು ವರದಿ ತಿಳಿಸಿದೆ.

 ಗರಿಷ್ಠ ಸಂಖ್ಯೆಯ ಕೊರೋನ ಪ್ರಕರಣಗಳು ವರದಿಯಾಗಿರುವ ಇತರ 15 ದೇಶಗಳ ವಿವರಗಳು ಹೀಗಿವೆ. ಬ್ರೆಝಿಲ್ (45,44,629), ರಶ್ಯ (11,05,048), ಪೆರು (7,68,895), ಕೊಲಂಬಿಯಾ (7,65,076), ಮೆಕ್ಸಿಕೋ (6,97,663), ದಕ್ಷಿಣ ಆಫ್ರಿಕ (6,61,211), ಸ್ಪೇನ್ (6,40,040), ಅರ್ಜೆಂಟೀನಾ (6,31,365), ಫ್ರಾನ್ಸ್ (4,67,614), ಚಿಲಿ (4,46,274), ಇರಾನ್ (4,22,140), ಬ್ರಿಟನ್ (3,96,744), ಬಾಂಗ್ಲಾದೇಶ (3,48,918), ಸೌದಿ ಆರೇಬಿಯ (3,29,754) ಹಾಗೂ ಇರಾಕ್ (3,19,035).

  ಕೋವಿಡ್-19 ಅತ್ಯಧಿಕ ಸಂಖ್ಯೆಯ ಸಾವುಗಳು ಬ್ರೆಝಿಲ್‌ನಲ್ಲಿ ಸಂಭವಿಸಿದ್ದು, ಅಲ್ಲಿ ಈತನಕ 1,36,895 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್-19ನಿಂದಾಗಿ 10 ಸಾವಿರಕ್ಕಿಂತ ಅಧಿಕ ಸಂಖ್ಯೆಯ ಸಾವುಗಳು ಸಂಭವಿಸಿರುವ ರಾಷ್ಟ್ರಗಳು: ಮೆಕ್ಸಿಕೊ (73,493), ಬ್ರಿಟನ್ (41,886), ಇಟಲಿ (35668), ಪೆರು (31,369), ಫ್ರಾನ್ಸ್ (31,257), ಸ್ಪೇನ್ (30,495), ಇರಾನ್ (24,301), ಕೊಲಂಬಿಯಾ (23,665), ರಶ್ಯ (19,420), ದಕ್ಷಿಣ ಆಫ್ರಿಕ (15,953), ಅರ್ಜೆಂಟೀನಾ (13,053), ಚಿಲಿ (12,286) ಹಾಗೂ ಈಕ್ವೆಡಾರ್ (11,090).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News