'ಎಮರ್ಜೆನ್ಸಿ ಹೆಲ್ಪ್' ತಂಡದಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ

Update: 2020-09-22 12:22 GMT

ತುಂಬೆ : ಲಾಕ್ ಡೌನ್ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದ ಹಲವಾರು ಸಮಾಜ ಸೇವಕರನ್ನು ಒಟ್ಟುಗೂಡಿಸಿ ರಚಿಸಲ್ಪಟ್ಟಂತಹ ಎಮರ್ಜೆನ್ಸಿ ಹೆಲ್ಪ್ ಲೈನ್ ವಾಟ್ಸಾಪ್ ಬಳಗವು ಸದಸ್ಯರನ್ನು ಒಟ್ಟುಗೂಡಿಸುವ ಸಲುವಾಗಿ ತುಂಬೆ ಬಸ್ ನಿಲ್ದಾಣದ ಬಳಿಯ ಖುಲ್ಸು ಸೆಂಟರ್ ಸಭಾಂಗಣದಲ್ಲಿ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ರವಿವಾರ ಏರ್ಪಡಿಸಲಾಗಿತ್ತು.

ಅಲ್ಲಿ ವಿವಿಧ ಭಾಗದಿಂದ ಒಟ್ಟು ಸೇರಿದ ಸಮಾಜ ಸೇವಕರುಗಳ ಪರಸ್ಪರ ಮುಖ ಪರಿಚಯ ಮಾಡುವಿಕೆ ಮತ್ತು ಎಲ್ಲಾ ಸದಸ್ಯರುಗಳ ಅಭಿಪ್ರಾಯಗಳನ್ನು ಕ್ರೋಡಿಕರಿಸಲಾಯಿತು. ಕಾರ್ಯಕ್ರಮದಲ್ಲಿ ಎಮರ್ಜೆನ್ಸಿ ಹೆಲ್ಪ್ ಲೈನ್ ಬಳಗದ ಕಾರ್ಯನಿರ್ವಾಹಕ ನಕಾಶ್ ಬಾಂಬಿಲ   ಸ್ವಾಗತಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಮತ್ತು ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಕಾರ್ಯನಿರ್ವಾಹಕ ಇಲ್ಯಾಸ್ ಮಂಗಳೂರು ತಂಡದ ಮುಂದಿರುವ ಜವಾಬ್ದಾರಿಗಳು ಮತ್ತು ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿಕೊಟ್ಟರು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದಲ್ಲಿ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಮಂಚೂಣಿಯಲ್ಲಿದ್ದ ಸಮಾಜಸೇವಕರುಗಳಾದ ಪಿ.ಬಿ.ಕೆ ಮೊಹಮ್ಮದ್ ಪುತ್ತೂರು, ಅಬ್ಬೋನು ಮದ್ದಡ್ಕ, ಬದ್ರುದ್ದೀನ್ ಉಳ್ಳಾಲ, ಫಾರೂಖ್ ರೊಮಾಂಟಿಕ್ ಆತೂರು ಅವರ ಸೇವೆಯನ್ನು ಗುರುತಿಸಿ MNG ಫೌಂಡೇಶನ್ ಮಂಗಳೂರು ಇದರ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಕಾರ್ಯನಿರ್ವಾಹಕರುಗಳಾದ ಎಮ್.ಎಮ್ ಮೋನು ನಂದಾವರ, ಫಯಾಝ್ ಮಾಡೂರು, ಇಶಾಕ್ ತುಂಬೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಸ್ ವಿಟ್ಲ ನಿರೂಪಿಸಿದರು. ಬಶೀರ್ ಪರ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News