ಎಸ್ಕೆಎಸ್ಸೆಸ್ಸೆಫ್ ತುಂಬೆ, ಎಂಎನ್ ಜಿ ಫೌಂಡೇಶನ್, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ

Update: 2020-09-22 12:29 GMT

ತುಂಬೆ: ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆ, ಎಮ್ ಎನ್ ಜಿ ಫೌಂಡೇಶನ್  ಮಂಗಳೂರು ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ ಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ತುಂಬೆ ದಿ.ಡಾ ಅಹ್ಮದ್ ಹಾಜಿ ಅವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ತುಂಬೆ ಬಸ್ಸು ನಿಲ್ದಾಣ ಹತ್ತಿರದ ಖುಲ್ಸು ಸೆಂಟರಿನಲ್ಲಿ ರವಿವಾರ ನಡೆಯಿತು.

ಸರಕಾರದ ಕೊರೋನ ಸುರಕ್ಷತಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಜರುಗಿದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 47 ಮಂದಿ ರಕ್ತದಾನಿಗಳಾಗಿ ಪಾಲ್ಗೊಂಡರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ಇದರ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

ಕಾರ್ಯಕ್ರಮದಲ್ಲಿ MJM ತುಂಬೆ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ಅವರು ದುಆ ಆಶಿರ್ವಚನ ನೀಡಿದರು ಮತ್ತು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್ ಜಝರಿ ಶಿಬಿರವನ್ನು ಉದ್ಘಾಟಿಸಿದರು.

ಕಲಂದರ್ ತುಂಬೆ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ ಎಸ್ಕೆಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಮುಹಮ್ಮದ್ ಇಸಾಕ್ ತುಂಬೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ  ಅಬ್ದುಲ್ ಸಲಾಮ್ (ವ್ಯವಸ್ಥಾಪಕರು, ಬಿ ಎ ಸಮೂಹ ಸಂಸ್ಥೆ ತುಂಬೆ), ಜ.ಮುನೀರ್ (ಗೌರವಾಧ್ಯಕ್ಷ, ಎಂಎನ್ ಜಿ ಫೌಂಡೇಶನ್), ಇಲ್ಯಾಸ್ ಮಂಗಳೂರು (ಸ್ಥಾಪಕರು, ಎಂಎನ್ ಜಿ ಫೌಂಡೇಶನ್), ಸಿದ್ದೀಕ್ ಮಂಜೇಶ್ವರ (ಮುಖ್ಯಸ್ಥರು ಬ್ಲಡ್ ಡೋನರ್ಸ್ ಮಂಗಳೂರು), ಮುಹಮ್ಮದ್ ಇಮ್ತಿಯಾಝ್ (ಅಧ್ಯಕ್ಷರು, ಎಂಜೆಎಂ ತುಂಬೆ), ಬಶೀರ್ ಮಜಲ್ (ವೈಸ್ ಚೇರ್ಮನ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ಕೇಂದ್ರ ಸಮಿತಿ),  ಹಬೀಬ್ ಅಬ್ದುಲ್ ರಹ್ಮಾನ್ (ಗೌರವಾಧ್ಯಕ್ಷರು, ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆ),  ಹಾಜಿ ಅಬ್ದುಲ್ ರಹ್ಮಾನ್ ಹದ್ದಾದಿ (ಅಧ್ಯಕ್ಷರು, ಎಸ್ ವೈ ಎಸ್ ತುಂಬೆ ಶಾಖೆ),  ಕೆ.ಎಮ್.ನಾಸೀರ್ (ಕಟ್ಟಡ ಮಾಲಕರು, ಖುಲ್ಸು ಸೆಂಟರ್ ತುಂಬೆ) ಹಾಗೂ  ಮುಹಮ್ಮದ್ ಫಯಾಝ್ ತುಂಬೆ (ವೈಸ್ ಚೇರ್ಮನ್,ಎಸ್ಕೆಎಸ್ಸೆಸ್ಸೆಫ್ ವಿಖಾಯ ಬಂಟ್ವಾಳ ವಲಯ) ಉಪಸ್ಥಿತರಿದ್ದರು.

ಅಬ್ದುಲ್ ರಶೀದ್ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು. ಫಯಾಝ್ ತುಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News