ಕೊಳಲಗಿರಿ ಪರಾರಿ ರಕ್ಷಿತಾರಣ್ಯದಲ್ಲಿ ಭೂಕುಸಿತ

Update: 2020-09-22 15:22 GMT

ಉಡುಪಿ, ಸೆ.22: ಬ್ರಹ್ಮಾವರ ತಾಲೂಕು ಹಾವಂಜೆ ಮತ್ತು ಉಪ್ಪೂರು ಗ್ರಾಮಗಳೆರಡಕ್ಕೂ ಸಂಬಂಧಪಟ್ಟ ರಿಂಗ್ ರೋಡ್ ಪರಿಸರದಲ್ಲಿ ಭಾರಿ ಭೂಕುಸಿತ ಉಂಟಾಗಿರುವುದು ಕಂಡುಬಂದಿದೆ.

ಈ ಪ್ರದೇಶ ರಕ್ಷಿತಾರಣ್ಯದಿಂದ ಕೂಡಿದೆ. ಕಳೆದ ಕೆಲವು ದಿನಗಳ ಸತತ ಮಳೆಯಿಂದ ಈ ಭಾಗದ ಹಸಿರು ರಕ್ಷಿತಾರಣ್ಯದ ಎತ್ತರ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಪರಿಸರದ ಹೆಚ್ಚಿನ ಮರಗಳು ನೆಲಕ್ಕುರುಳಿವೆ. ಇದರ ಪಕ್ಕದಲ್ಲೇ ಮದಗವೊಂದು ಇರುವುದರಿಂದ ಅದರಲ್ಲಿ ನೀರು ತುಂಬಿ ತುಳುಕುತ್ತಿದೆ.

ಈ ಭೂಪ್ರದೇಶದ ಸುತ್ತಮುತ್ತ ಅನೇಕ ಮನೆಗಳಿವೆ. ಈ ಪ್ರದೇಶ ಇನ್ನಷ್ಟು ಕುಸಿತವಾಗುವ ಮತ್ತು ಹಾನಿಯಾಗುವ ಸಂಭವವೂ ಇದೆ. ಇದಕ್ಕೆ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡರೆ ಪರಿಸರವನ್ನು ಹಾಗೂ ಜೀವ ಹಾನಿಯನ್ನು ತಪ್ಪಿಸಲು ಸಾಧ್ಯ ಎಂದು ಪರಿಸರಪ್ರೇಮಿ ಕೊಳಲಗಿರಿಯ ಪೌಲ್ ಅಲ್ಮೇಡಾ ಹಾಗೂ ಕೀಳಂಜೆಯ ನಿವಾಸಿ ಜಯಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News