ಶಿರೂರು ಬಳಿ ಸಮುದ್ರ ತೀರದಲ್ಲಿ ವಿಚಿತ್ರಕಾರಿ ವಸ್ತು ಪತ್ತೆ

Update: 2020-09-22 15:23 GMT

 ಬೈಂದೂರು, ಸೆ.22: ಶಿರೂರು ಗ್ರಾಮದ ಪಡಿಯಾರ ಹಿತ್ತಲು ಎಂಬಲ್ಲಿ ಸಮುದ್ರದಲ್ಲಿ ತೇಲಿ ಬಂದ ಸಿಲಿಂಡರ್ ಆಕಾರದ ಕಬ್ಬಿಣದ ವಸ್ತುವೊಂದು ಇಂದು ಬೆಳಗ್ಗೆ ಪತ್ತೆಯಾಗಿದೆ.

ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲು ಪಡೆಯ ಪೊಲೀಸರು ಪರಿಶೀಲನೆ ನಡೆಸಿ ದ್ದಾರೆ. ಇದು ನೌಕಾಪಡೆಗೆ ಸಂಬಂಧಿಸಿದ ವಸ್ತು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎನ್ನಲಾಗಿದೆ.

‘ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಸಿಲಿಂಡರ್ ಆಕಾರದ ಕಬ್ಬಿಣದ ವಾರಸುದಾರರಿಲ್ಲದ ವಸ್ತುವಿನ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವ ನಿಟ್ಟಿ ನಲ್ಲಿ ನೌಕಾಪಡೆ ಹಾಗೂ ಕೋಸ್ಟ್‌ಗಾರ್ಡ್‌ಗೆ ಪತ್ರ ಬರೆಯಲಾಗಿದೆ. ತಜ್ಞರ ಅಭಿಪ್ರಾಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಪ್ರವೀಣ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News