ಆನ್‌ಲೈನ್‌ನಲ್ಲಿ ವಿಶ್ವಸಂಸ್ಥೆಯ ಪ್ಲಾಟಿನಂ ಜುಬಿಲಿ ಸಮಾವೇಶ

Update: 2020-09-22 16:14 GMT

ವಿಶ್ವಸಂಸ್ಥೆ, ಸೆ. 22: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಜಾಗತಿಕ ನಾಯಕರು ಸೋಮವಾರ ವಿಶ್ವಸಂಸ್ಥೆಯ 75ನೇ ವಾರ್ಷಿಕ ಅಧಿವೇಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿದರು. ಕೊರೋನ ವೈರಸ್ ಜಾಗತಿಕ ಮಟ್ಟದಲ್ಲಿ ಒಡ್ಡಿದ ಸವಾಲುಗಳು ಮತ್ತು ಅಮೆರಿಕ-ಚೀನಾ ಹಾಗೂ ಭಾರತ-ಚೀನಾ ನಡುವಿನ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಜಾಗತಿಕ ಸಂಘಟನೆಯ ಪ್ಲಾಟಿನಂ ಜುಬಿಲಿ ಸಮಾವೇಶ ನಡೆಯುತ್ತಿದೆ.

‘‘ವಿಶ್ವಸಂಸ್ಥೆಯು ಹಲವು ವಿಧಗಳಲ್ಲಿ ಯಶಸ್ವಿ ಪ್ರಯೋಗವೆಂದು ಸಾಬೀತಾಗಿದೆ, ಆದರೆ, ಈಗಲೂ ಹಲವು ಕಳವಳಗಳು ಉಳಿದುಕೊಂಡಿವೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ಉಪ ರಾಯಭಾರಿ ಚೆರಿತ್ ನಾರ್ಮನ್ ಶಾಲೆಟ್ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

 ‘‘ವಿಶ್ವಸಂಸ್ಥೆಯು ತುಂಬಾ ಸಮಯದಿಂದ ಅರ್ಥಪೂರ್ಣ ಸುಧಾರಣೆಗಳನ್ನು ವಿರೋಧಿಸುತ್ತಾ ಬಂದಿದೆ, ಹಲವು ಸಂದರ್ಭಗಳಲ್ಲಿ ಪಾರದರ್ಶಕತೆಯ ಕೊರತೆಯನ್ನು ಅನುಭವಿಸಿದೆ ಹಾಗೂ ಸರ್ವಾಧಿಕಾರಿ ದೇಶಗಳು ಮತ್ತು ಸರ್ವಾಧಿಕಾರಿಗಳ ದರ್ಪಕ್ಕೆ ನಲುಗಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News