ಕಾಪು : ಮಹಿಳೆ ಸಹಿತ ಮೂವರಿಗೆ ಚೂರಿ ಇರಿತ

Update: 2020-09-22 16:37 GMT

ಕಾಪು : ಯುವಕರ ತಂಡವೊಂದು ಮನೆಗೆ ನುಗ್ಗಿ ಮಹಿಳೆ ಹಾಗೂ ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ ಘಟನೆ ಕಾಪುವಿನ ಮಲ್ಲಾರು ಗುಡ್ಡೆಕೇರಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರು ಹಸನಬ್ಬ ಹಾಗೂ ಅವರ ಸಹೋದರಿ ಮಮ್ತಾಝ್ ಎಂದು ಗುರುತಿಸಲಾಗಿದೆ.

ಸೋಮವಾರ ತಡರಾತ್ರಿ ಕಾರಿನಲ್ಲಿ ಬಂದ ಏಳು ಮಂದಿಯ ತಂಡ ಬಾಗಿಲನ್ನು ಮುರಿದು ಒಳನುಗ್ಗಿ ಕೋಣೆಯೊಳಗೆ ಮಲಗಿದ್ದ ಮನೆಯವರನ್ನು ಬೆದರಿಸಿ,  ಹಸನಬ್ಬ ಅವರಿಗೆ ದೊಣ್ಣೆ ಹಾಗೂ ತಲವಾರಿನಲ್ಲಿ ಹಲ್ಲೆ ನಡೆಸಿ  ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. 

ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News