​ಸುರತ್ಕಲ್‌ಗೂ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪಿಸಲಿ: ಮೊಯ್ದಿನ್ ಬಾವ

Update: 2020-09-22 18:23 GMT

ಮಂಗಳೂರು : ಸ್ಮಾರ್ಟ್‌ಸಿಟಿ ಯೋಜನೆ ಆರಂಭವಿಸುವಾಗ ಹಂಪನಕಟ್ಟೆ, ಬಂದರು ಪ್ರದೇಶಗಳ ಅಭಿವೃದ್ಧಿಗೆ ಸೀಮಿತಗೊಳಿಸಲಾಗಿತ್ತು. ಈಗ ಪಂಪ್‌ವೆಲ್-ಪಡೀಲ್ ರಸ್ತೆ ಸೇರಿದಂತೆ ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿಯನ್ನು ಸುರತ್ಕಲ್ ಪ್ರದೇಶಕ್ಕೂ ವ್ಯಾಪಿಸಲಿ ಎಂದು ಮಾಜಿ ಸಾಸಕ ಮೊಯ್ದಿನ್ ಬಾವ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮತಾನಾಡಿದ ಅವರು, ಯೋಜನೆಯ ಆರಂಭವಾದ ಸಂದರ್ಭ ಹೇಳಿದ ಹಾಗೆ ಈಗ ಕಾಮಗಾರಿಗಳು ನಡೆಯುತ್ತಿಲ್ಲ. ಜನಪ್ರತಿನಿಧಿಗಳು ತಮಗೆ ತೋಚಿದ ಹಾಗೆ ಹಣದ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಾಕೃತಿಕ ವಿಕೋಪಕ್ಕೆ ಕಾರಣಕ್ಕೆ ಬಲಿಯಾದ ನೀರುಮಾರ್ಗ ನಿವಾಸಿ ರಾಜೇಶ್‌ರಿಗೆ 5ಲಕ್ಷ ರೂ. ಸರಕಾರ ಪರಿಹಾರ ನೀಡಿದ್ದು, ಅದನ್ನು 10ಲಕ್ಷ ರೂ.ಗೆ ಏರಿಕೆ ಮಾಡಬೇಕು. ಜಿಲ್ಲಾಡಳಿತ ಕೂಡಲೇ ರಾಜೇಶ್ ಅವರ ಮನೆ ರಿಪೇರಿಗೆ ಕ್ರಮಕೈಗೊಳ್ಳಬೇಕು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಳೆಯಿಂದ ನಷ್ಟವುಂಟಾದ ಕೊಳಂಜೆ ಗುಲಾಬಿ, ಯಮುನಾ, ಮಹಾಬಲ, ಮೋನಪ್ಪ ಪೂಜಾರಿ ಕುಟುಂಬಕ್ಕೆ ಪರಿಹಾರ ನೀಡಬೇಕು, ಮಳೆಯಿಂದ ಕುಸಿತಗೊಂಡ ನೀರುಮಾರ್ಗ-ಕಟಿಂಜ ಸಂಪರ್ಕ ರಸ್ತೆಯನ್ನು ಪ್ರಾಕೃತಿಕ ವಿಕೋಪ ನಿಬಳಸಿ ಕೂಡಲೇ ಪುನರ್ ನಿರ್ಮಾಣ ಮಾಡಬೇಕು. ಜಾನುವಾರು ಕೊಟ್ಟಿಗೆಗಳಿಗಾದ ನಾಶ-ನಷ್ಟ ಪರಿಹಾರ ನೀಡಬೇಕು, ಹೊಸಬೆಟ್ಟು ಬೈಲಾರಿ ಪ್ರದೇಶದಲ್ಲಿ 5ಕೋಟಿ ಮತ್ತು 1.5ಕೋಟಿ ಅನುದಾನದಿಂದ ಕಾಮಗಾರಿ ನಡೆಸಿದ್ದು, ನಂತರ ಬಂದ ಸರಕಾರದಿಂದ ಯಾವುದೇ ಅನುದಾನ ಬಾರದೆ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಮಳೆಯಿಂದ ಕೃತಕ ನೆರೆ ಉಂಟಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಕೊಳಂಬೆ ಪ್ರದೇಶದಲ್ಲಿ ಕಂದಾವರಕ್ಕೆ ತಲುಪುವ ಸಂಪರ್ಕ ರಸ್ತೆಯು ಬಿರುಕುಬಿಟ್ಟಿದ್ದು, ಯಾವ ಸಮಯದಲ್ಲೂ ಬೀಳಬಹುದು. ಈ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬ್ಳಿ, ಸುರತ್ಕಲ್ ಹಿಂದುಳಿದ ವರ್ಗಗಳ ಅಧ್ಯಕ್ಷ ಉಮೇಶ್ ದಂಡೆಕೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News