ಮಂಗಳೂರು ವಿವಿ: ರದ್ದುಗೊಂಡ ಸೆ.21ರ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

Update: 2020-09-23 12:55 GMT

ಮಂಗಳೂರು, ಸೆ.23: ಭಾರೀ ಮಳೆಯ ಹಿನ್ನೆಲೆಯಲ್ಲಿ ಸೆ.21ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ರದ್ದುಗೊಳಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯವು ಇದೀಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟಂಬರ್ 26ರಿಂದ ಅನ್ವಯವಾಗುವಂತೆ ಪರೀಕ್ಷೆಗಳ ದಿನಾಂಕವನ್ನು ಪರಿಷ್ಕೃರಿಸಿದ್ದು, ಅಕ್ಟೋಬರ್ 26ರವರೆಗೆ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಅಪರಾಹ್ನ 2ರಿಂದ ಸಂಜೆ 5ರವರೆಗೆ ನಡೆಯಲಿದೆ. ಉಳಿದಂತೆ ಇತರ ಯಾವುದೇ ಪರೀಕ್ಷೆಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ ಎಂದು ಪರೀಕ್ಷಾಂಗ ಕುಲಸಚಿವರ ಪ್ರಕಟನೆ ತಿಳಿಸಿದೆ.

ಬಿ.ಎ. ಪ್ರಥಮ ಸೆಮಿಸ್ಟರ್ ಜರ್ನಲಿಸಂ 1 ಪರೀಕ್ಷೆಯು ಅ.1ರ ಬೆಳಗ್ಗೆ 10ರಿಂದ ಮಧ್ಯಾಹ್ನ 1, ಬಿ.ಎ.ದ್ವಿತೀಯ ಸೆಮಿಸ್ಟರ್ ಜರ್ನಲಿಸಂ 11 ಪರೀಕ್ಷೆಯು ಅ.1ರ ಅಪರಾಹ್ನ 2ರಿಂದ ಸಂಜೆ 5, ಬಿ.ಎ. ಪಂಚಮ ಪರೀಕ್ಷೆಯು ಅ.14ರಂದು ಅಪರಾಹ್ನ 2ರಿಂದ ಸಂಜೆ 5, ಬಿಎಸ್‌ಡಬ್ಲು ಪಂಚಮ ಸೆಮಿಸ್ಟರ್ ಪರೀಕ್ಷೆಯು ಸೆಪ್ಟಂಬರ್ 30ರಂದು ಮಧ್ಯಾಹ್ನ 2ರಿಂದ ಸಂಜೆ 5, ಬಿಎಸ್ಸಿ ಪಂಚಮ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 14ರ ಮಧ್ಯಾಹ್ನ 2ರಿಂದ ಸಂಜೆ 5, ಬಿ.ಕಾಂ. ಪಂಚಮ ಸೆಮಿಸ್ಟರ್ ಪರೀಕ್ಷೆಯು ಅ.14ರ ಅಪರಾಹ್ನ 2ರಿಂದ ಸಂಜೆ 5, ಬಿ.ಎ. ಅರನೆ ಸೆಮಿಸ್ಟರ್, ಬಿಎಸ್‌ಡಬ್ಲು ಆರನೇ ಸೆಮಿಸ್ಟರ್, ಬಿಎಸ್ಸಿ ಆರನೇ ಸೆಮಿಸ್ಟರ್, ಬಿಕಾಂ ಆರನೇ ಸೆಮಿಸ್ಟರ್ ಪರೀಕ್ಷೆಯು ಅ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ.

ಬಿ.ಎ. ಆರನೇ ಸೆಮಿಸ್ಟರ್, ಬಿಎಸ್ಸಿ ಆರನೆ ಸೆಮಿಸ್ಟರ್, ಬಿಕಾಂ ಆರನೆ ಸೆಮಿಸ್ಟರ್, ಪರೀಕ್ಷೆಯು ಅಕ್ಟೋಬರ್ 16ರಂದು ಬೆಳಗ್ಗೆ 10ರಿಂದ ಮಧ್ಯಾಹ 1ರವರೆಗೆ, ಬಿಎ ದ್ವಿತೀಯ ಸೆಮಿಸ್ಟರ್ ಅ. 12ರಂದು ಅಪರಾಹ್ನ 2ರಿಂದ 5ರವರೆಗೆ, ಬಿ.ಎ.ಆರನೇ ಸೆಮಿಸ್ಟರ್ (ಎಚ್‌ಆರ್‌ಡಿ) ಪರೀಕ್ಷೆಯು ಅ. 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಸಿಎ ಚತುರ್ಥ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 7ರಂದು ಮಧ್ಯಾಹ್ನ 2ರಿಂದ ಸಂಜೆ 5ರರವೆಗೆ, ಬಿಸಿಎ ಪರೀಕ್ಷೆಯು ಅಕ್ಟೋಬರ್ 7ರಿಂದ ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಎ ಎಸ್‌ಎಲ್‌ಪಿ ಚತುರ್ಥ ಪರೀಕ್ಷೆಯು ಅಕ್ಟೋಬರ್ 9ರಂದು ಅಪರಾಹ್ನ 2ರಿಂದ ಸಂಜೆ 4ರವರೆಗೆ (ಹೊಸ ಸಿಲೆಬಸ್) ಮತ್ತು ಅಪರಾಹ್ನ 2ರಿಂದ ಸಂಜೆ 5ರವರೆಗೆ (ಹಳೆ ಸಿಲೆಬಸ್), ಬಿಎ ಎಸ್‌ಎಲ್‌ಪಿ ಆರನೆ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 9ರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ (ಹೊಸ ಸಿಲೆಬಸ್), ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ (ಹಳೆ ಸಿಲೆಬಸ್), ಬಿಎಸ್ಸಿ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 12ರಂದು ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಎಸ್ಸಿ ಚತುರ್ಥ ಸೆಮಿಸ್ಟರ್ ಪರೀಕ್ಷೆಯು ಸೆಪ್ಟಂಬರ್ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಎಸ್ಸಿ ಪ್ರಥಮ ಸೆಮಿಸ್ಟರ್ ಪರೀಕ್ಷೆಯು ಸೆಪ್ಟಂಬರ್ 26ರಂದು ಬೆಳಗ್ಗೆ 10ರಂದ ಮಧ್ಯಾಹ್ನ 1ರವರೆಗೆ, ಬಿಎಸ್ಸಿ ಪಂಚಮ ಸೆಮಿಸ್ಟರ್ (ಫುಡ್ ಟೆಕ್ನಾಲಜಿ) ಪರೀಕ್ಷೆಯು ಸೆಪ್ಟಂಬರ್ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಎಚ್‌ಎಂ ತೃತೀಯ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಎಚ್‌ಎಂ ಏಳನೆ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 12ರಂದು ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಎಸ್ಸಿ ತೃತೀಯ ಸೆಮಿಸ್ಟರ್ ಪರೀಕ್ಷೆಯು ಅಕ್ಟೊಬರ್ 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಎಸ್ಸಿ ಚತುರ್ಥ ಸೆಮಿಸ್ಟರ್ ಅಕ್ಟೋಬರ 12ರಂದು ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಬಿಎ/ಬಿಬಿಎಂ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 14ರಂದಯ ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಬಿಎ/ಬಿಬಿಎಂ ಅರನೆ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಎಸ್ಸಿ ಪಂಚಮ ಪರೀಕ್ಷೆಯು ಅಕ್ಟೋಬರ್ 12ರಂದು ಅಪರಾಹ್ನ 2ರಿಂದ ಸಂಜೆ 5ರವರೆಗೆ, ಬಿಎಸ್ಸಿ ಆರನೆ ಸೆಮಿಸ್ಟರ್ ಪರೀಕ್ಷೆಯು ಅಕ್ಟೋಬರ್ 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, ಬಿಬಿಎ ನಾಲ್ಕನೆ ವರ್ಷದ ಪರೀಕ್ಷೆಯು ಸೆ.26ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News