ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

Update: 2020-09-23 12:49 GMT

ಉಡುಪಿ, ಸೆ.23: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಂಗೀತ ನೃತ್ಯದಲ್ಲಿ ಪ್ರಕಟವಾಗಿರುವ ಕನ್ನಡದ ಉತ್ತಮ ಪುಸ್ತಕಕ್ಕೆ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾ ಕೀರ್ತನ, ಗಮಕ ಈ ಕಲಾ ಪ್ರಕಾರಗಳಲ್ಲಿ 2019ರ ಜನವರಿ ಯಿಂದ ಡಿಸೆಂಬರ್ ಒಳಗೆ ಪ್ರಕಟಗೊಂಡಿರುವ ಪುಸ್ತಕಗಳನ್ನು ಮಾತ್ರ ಬಹುಮಾನಕ್ಕೆ ಸಲ್ಲಿಸಬಹುದು.

ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು ಇವರಿಗೆ ಸೆ.30ರೊಳಗೆ ಅರ್ಜಿ ಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು. ಅರ್ಜಿಯನ್ನು ಅಕಾಡೆಮಿ ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಹಾಗೂ ಅಕಾಡೆಮಿಯ ವೆಬ್‌ಸೈಟ್ -https://karnatakasangeetanrityaacademy.com- ಮೂಲಕ ಪಡೆಯ ಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News