ಪರಿಶಿಷ್ಟ ಜಾತಿ/ಪಂಗಡದವರಿಗೆ ಸಹಾಯಧನ: ಅರ್ಜಿ ಆಹ್ವಾನ
Update: 2020-09-23 19:46 IST
ಉಡುಪಿ, ಸೆ.23: ಕಾರ್ಕಳ ಪುರಸಭಾ ವ್ಯಾಪ್ತಿಯ ಪ್ರಸ್ತುತ ಸಾಲಿನ ಶೇ.24.10 ರ ಎಸ್‌ಎಫ್‌ಸಿ ಮತ್ತು ಪುರಸಭಾ ಅನುದಾನದಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮನೆ ಮೇಲ್ಛಾವಣಿ ದುರಸ್ಥಿ, ವಿದ್ಯಾರ್ಥಿ ವೇತನ ಹಾಗೂ ಶೇ.7.25ರ ಇತರೇ ಬಡಜನರ ಕಲ್ಯಾಣ ಕಾರ್ಯಕ್ರಮದಲ್ಲಿ ಮನೆ ಮೇಲ್ಛಾವಣಿ ದುರಸ್ಥಿ ಹಾಗೂ ಶೇ.5ರ ವಿಶೇಷ ಚೇತನರ ಶ್ರೇಯೋಭಿವೃದ್ದಿ ನಿಧಿಯಲ್ಲಿ ವಿದ್ಯಾರ್ಥಿ ವೇತನ, ಸಾಧನ ಸಲಕರಣೆ ಖರೀದಿ, ಕೃತಕ ಅಂಗಜೋಡಣೆಗೆ ಸಹಾಯಧನ ನಿಗದಿಪಡಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.