ಭಾರತೀಯ ಅಮೆರಿಕನ್ನರಿಂದ ಅಮೆರಿಕದ ಆರ್ಥಿಕ ಬೆಳವಣಿಗೆಗೆ ಬಲ: ಬೈಡನ್

Update: 2020-09-23 15:00 GMT

ವಾಶಿಂಗ್ಟನ್, ಸೆ. 23: ಭಾರತೀಯ ಅಮೆರಿಕನ್ನರು ತಮ್ಮ ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯ ಮೂಲಕ ಅಮೆರಿಕದ ಆರ್ಥಿಕ ಬೆಳವಣಿಗೆಗೆ ಬಲ ನೀಡಿದ್ದಾರೆ ಹಾಗೂ ದೇಶದಲ್ಲಿ ಸಾಂಸ್ಕೃತಿಕ ಚಲನಶೀಲತೆಗೆ ದೇಣಿಗೆ ನೀಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ಮಂಗಳವಾರ ಹೇಳಿದ್ದಾರೆ.

ಭಾರತೀಯ ಅಮೆರಿಕನ್ನರು ಸಂಘಟಿಸಿದ ರಾಷ್ಟ್ರೀಯ ಆನ್‌ಲೈನ್ ನಿಧಿ ಸಂಗ್ರಹ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಾನು ಅಧ್ಯಕ್ಷನಾಗಿ ಎಚ್-1ಬಿ ವೀಸಾ ಮತ್ತು ಕಾನೂನುಬದ್ಧ ವಲಸಿಗರಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವುದಾಗಿ ಸಮುದಾಯ ಸದಸ್ಯರಿಗೆ ಅವರು ಭರವಸೆ ನೀಡಿದರು.

‘‘ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮಿಗಳು, ಸಿಲಿಕಾನ್ ಕಣಿವೆಯ ಆಧಾರಸ್ತಂಭವಾಗಿರುವ ತಂತ್ರಜ್ಞರು ಹಾಗೂ ಜಗತ್ತಿನಲ್ಲಿ ಅತ್ಯಂತ ಪ್ರಭಾವಿ ಕಂಪೆನಿಗಳನ್ನು ನಡೆಸುತ್ತಿರುವವರ ಪೈಕಿ ಕೆಲವರು ಭಾರತೀಯ ಸಮುದಾಯದಿಂದ ಬಂದವರಾಗಿದ್ದಾರೆ’’ ಎಂದು ಮಾಜಿ ಉಪಾಧ್ಯಕ್ಷರೂ ಆಗಿರುವ ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News