ಸೆಂಟ್ರಲ್ ಮಾರುಕಟ್ಟೆ ವಿವಾದ : ವ್ಯಾಪಾರಿಗಳ ದಾಖಲೆಪತ್ರ ಕೇಳಿದ ಮನಪಾ

Update: 2020-09-23 15:05 GMT

ಮಂಗಳೂರು, ಸೆ.23: ಸೆಂಟ್ರಲ್ ಮಾರುಕಟ್ಟೆ ವಿವಾದ ತಾರಕ್ಕೇರುತ್ತಿರುವ ಮಧ್ಯೆಯೇ ಅಲ್ಲಿ ಪರವಾನಿಗೆ ಪಡೆದು ವ್ಯಾಪಾರ ಮಾಡುತ್ತಿರುವವರ ದಾಖಲೆಪತ್ರಗಳನ್ನು ಮನಪಾ ಅಧಿಕೃತವಾಗಿ ಕೋರಿದೆ.

ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದ ಮೇರೆಗೆ ಮಾನ್ಯತೆ ಪಡೆದ ವ್ಯಾಪಾರ ಪರವಾನಗಿ ಹೊಂದಿರುವ ವ್ಯಾಪಾರಿಗಳು ವಾಣಿಜ್ಯ ಪರವಾನಗಿ ಪತ್ರ, ಗುರುತುಪತ್ರ ಸಹಿತ ಎಲ್ಲಾ ಪುರಾವೆ/ದಾಖಲೆ ಯೊಂದಿಗೆ ಜೊತೆಗೆ ಮನಪಾ ಆಯುಕ್ತರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಅದರಂತೆ ಬುಧವಾರ ಹಲವು‌ ಮಂದಿ ದಾಖಲೆ ಸಲ್ಲಿಸಿದ್ದಾರೆ. ಈ ಮಧ್ಯೆ ಮನಪಾ ಸೆ.24ರಂದು ಸಂಜೆ 4ರಿಂದ 6ರವರೆಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದೆ. ದಾಖಲೆಗಳ ಪರಿಶೀಲನೆಯ ಬಳಿಕ ಕೆಲವು ಷರತ್ತುಗಳಿಗೆ ಒಳಪಟ್ಟು ಕಾನೂನುಬದ್ಧ ವ್ಯಾಪಾರ ಚಟುವಟಿಕೆಯನ್ನು ಪುನಃ ಆರಂಭಿಸುವ ಬಗ್ಗೆ ತಿಳಿಸಲಾಗುವುದು ಎಂದು ಸೂಚಿಸಿದೆ. ಒಟ್ಟಿನಲ್ಲಿ ಪಾಲಿಕೆಯ ಈ ಹೆಜ್ಜೆಯು ಮಾಂಸ ವ್ಯಾಪಾರಸ್ಥರಲ್ಲಿ ಆಶಾಭಾವ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News