ಅಳಕೆಮಜಲು : ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ, ಪ್ರತಿಭಾ ಪುರಸ್ಕಾರ

Update: 2020-09-23 16:53 GMT

ವಿಟ್ಲ : ಅಳಕೆಮಜಲು ಹಿದಾಯತುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಅಳಕೆಮಜಲು ಮದರಸ ಹಾಲ್ ನಲ್ಲಿ ನಡೆಯಿತು.

ಅಳಕೆಮಜಲು ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಶರೀಫ್ ಸಖಾಫಿ ಉದ್ಘಾಟಿಸಿದ್ದರು, ಮಾಜಿ ಕಾರ್ಯದರ್ಶಿ ಅಬ್ದುರ್ರಹ್ಮಾನ್ (ಪುತ್ತು) ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕ್ರತ ಅಳಕೆಮಜಲು ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮಂಗಳೂರು ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪಡೆದ ಪಿ.ಎ. ಕಾಲೇಜು ಬ್ಯುಸ್ನೆಸ್ ಮೆನೇಜ್ಮೆಂಟ್ ನಿರ್ದೇಶಕ ಡಾ.ಸಯ್ಯದ್ ಅಮೀನ್ ಅಹಮದ್ ಹಾಗೂ ಎಸ್.ಡಿ.ಎಂ.ಕಾನೂನು ಕಾಲೇಜಿನಿಂದ ವಕೀಲರಾಗಿ ತೇರ್ಗಡೆಯಾದ ಯೂನುಸ್ ಬಗ್ಗುಮೂಲೆ ಅವರನ್ನು ಸನ್ಮಾನಿಸಲಾಯಿತು.

ಈ ಬಾರಿಯ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಅಳಕೆಮಜಲು ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪುರಷ್ಕರಿಸಲಾಯಿತು.

ಅಳಕೆಮಜಲು ಎಂ.ಜೆ.ಎಂ. ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್ ಕುಂಞಿ, ಮಾಜಿ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಐ.ಎಂ.ವೈ.ಎ. ಮಾಜಿ ಅಧ್ಯಕ್ಷ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಹಂಝ ಪಿ.ಎ, ಅಬ್ದುಲ್ ಖಾದರ್ ಮುಸ್ಲಿಯಾರ್, ರಫೀಕ್ ಸಅದಿ,  ಸದರ್ ಉಸ್ತಾದ್ ದಾವೂದ್ ಅಶ್ರಫಿ, ಹನೀಫ್ ಸಅದಿ, ಅಬ್ದುಲ್ ರಝಾಕ್ ಅಲ್ ಮದೀನ, ಉಸ್ಮಾನ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.

ಶಾಕಿರ್ ಅಳಕೆಮಜಲು ಸ್ವಾಗತಿಸಿ ಶಾಕಿರ್ ಅಲ್ ಮದೀನ ವಂದಿಸಿದರು. ಹಿದಾಯತುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾತಿಶ್ ಅಳಕೆಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News