×
Ad

ಆ್ಯಂಡ್ರೆ ರಸೆಲ್ ಹೊಡೆತಕ್ಕೆ ಗಾಜು ಪುಡಿ ಪುಡಿ

Update: 2020-09-24 10:22 IST

ಅಬುಧಾಬಿ, ಸೆ. 24: ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಲ್‌ರೌಂಡರ್ ವೆಸ್ಟ್‌ಇಂಡೀಸ್‌ನ ಆ್ಯಂಡ್ರೆ ರಸೆಲ್ ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ .

ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆವೃತ್ತಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವರು ಉತ್ಸುಕರಾಗಿದ್ದಾರೆ. ಅಬುಧಾಬಿಯ ಶೇಖ್ ಝಾಹಿದ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮುನ್ನ ನೆಟ್ಸ್ ಅಭ್ಯಾಸದ ವೇಳೆ ರಸೆಲ್ ಚೆಂಡನ್ನು ಕ್ರೀಡಾಂಗಣದ ಎಲ್ಲಾ ಮೂಲೆಗಳಿಗೆ ಅಟ್ಟುತ್ತಿರುವ ವೀಡಿಯೊ ದಾಖಲೆಯನ್ನು ಕೆಕೆಆರ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಕೊನೆಯಲ್ಲಿ ರಸೆಲ್ ಚೆಂಡನ್ನು ಹೊಡೆದ ರಬಸಕ್ಕೆ ಕ್ರೀಡಾಂಗಣದ ಕ್ಯಾಮರಾಕ್ಕೆ ಅಳವಡಿಸಲಾದ ರಕ್ಷಣಾತ್ಮಕ ಕವರ್ ಗ್ಲಾಸ್ ಚೂರುಚೂರಾಗಿದೆ. 2019ರ ಐಪಿಎಲ್ ಆವೃತ್ತಿಯಲ್ಲಿ ರಸೆಲ್ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 510 ರನ್ ಗಳಿಸಿದ್ದರು. ಒಟ್ಟು 31 ಬೌಂಡರಿಗಳು ಮತ್ತು 52 ಸಿಕ್ಸರ್ ಬಾರಿಸಿದ್ದಾರೆ. 11 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News