ರೂಪಾಂತರಗೊಳ್ಳುತ್ತಾ ವಿಕಾಸಗೊಳ್ಳುತ್ತಿರುವ ಕೊರೋನ ವೈರಸ್: ಹೊಸ ಅಧ್ಯಯನ

Update: 2020-09-24 14:07 GMT

ವಾಶಿಂಗ್ಟನ್, ಸೆ. 24: ಅಮೆರಿಕದ ಹ್ಯೂಸ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಬುಧವಾರ ಕೊರೋನ ವೈರಸ್‌ನ 5,000ಕ್ಕೂ ಅಧಿಕ ವಂಶವಾಹಿ ಸರಪಳಿ (ಜನೆಟಿಕ್ ಸೀಕ್ವೆನ್ಸಸ್)ಗಳ ಮೇಲೆ ನಡೆದ ಅಧ್ಯಯನಗಳನ್ನು ಬಿಡುಗಡೆಗೊಳಿಸಿದ್ದು, ವೈರಸ್ ನಿರಂತರವಾಗಿ ರೂಪಾಂತರ ಹೊಂದುತ್ತಿರುವುದನ್ನು ಅವು ತೋರಿಸಿವೆ. ಈ ಪೈಕಿ ಒಂದು ರೂಪಾಂತರವು ವೈರಸನ್ನು ಹೆಚ್ಚು ಸಾಂಕ್ರಾಮಿಕವನ್ನಾಗಿಸಿದೆ.

ರೂಪಾಂತರದಿಂದಾಗಿ ರೋಗಿಗಳಲ್ಲಿ ವೈರಸ್ ಚಟುವಟಿಕೆಗಳು ಆರಂಭಿಕ ಹಂತಗಳಲ್ಲಿ ಅಧಿಕವಾಗಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ವೈರಸ್‌ನ ಅತ್ಯಧಿಕ ವಂಶವಾಹಿ ಸರಪಳಿಗಳು ಅಮೆರಿಕದಲ್ಲೇ ಇವೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಆದರೆ, ಈ ರೂಪಾಂತರಗಳಿಂದಾಗಿ ವೈರಸ್ ಹೆಚ್ಚು ಮಾರಕವಾಗಿದೆ ಎನ್ನುವುದು ಸಾಬೀತಾಗಿಲ್ಲ.

ಮುಖಗವಸು ಧರಿಸುವುದು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮುಂತಾದ ಜನರ ಕ್ರಿಯೆಗಳಿಗಾಗಿ ವೈರಸ್ ರೂಪಾಂತರಗೊಳ್ಳುವ ಮೂಲಕ ಪ್ರತಿಕ್ರಿಯೆ ನೀಡುತ್ತಿರಬಹುದು ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್‌ಫೆಕ್ಶಿಯಸ್ ಡಿಸೀಸಸ್‌ನಲ್ಲಿ ವೈರಾಣು ತಜ್ಞರಾಗಿರುವ ಡೇವಿಡ್ ಮೊರೆನ್ಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News