ಅಮೆರಿಕದಲ್ಲಿ ಜನಾಂಗೀಯ ಅಶಾಂತಿ ಸೃಷ್ಟಿಸಲು ಚೀನಾ ಯತ್ನ

Update: 2020-09-24 14:34 GMT

ಮ್ಯಾಡಿಸನ್ (ಅಮೆರಿಕ), ಸೆ. 24: ಚೀನಾವು ಜನಾಂಗೀಯ ತಾರತಮ್ಯವನ್ನು ಟೀಕಿಸುವ ಮೂಲಕ ಅಮೆರಿಕದಲ್ಲಿ ಅಶಾಂತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಆರೋಪಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ವಿಸ್ಕೋನ್ಸಿನ್ ರಾಜ್ಯದ ಶಾಸಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಈ ಆರೋಪವನ್ನು ಮಾಡಿದ್ದಾರೆ.

‘‘ಉತ್ತರದಾಯಿತ್ವ ನಿಗದಿಗಾಗಿ ಹೋರಾಡುತ್ತಿರುವ ಅಮೆರಿಕನ್ನರ ಕೂಗನ್ನು, ಜನಾಂಗೀಯ ತಾರತಮ್ಯ ಎಂದು ಬೊಬ್ಬೆಹಾಕುವ ಮೂಲಕ ದಮನಿಸಬಹುದು ಎಂಬುದಾಗಿ ಚೀನಾದ ಕಮ್ಯುನಿಸ್ಟ್ ಪಕ್ಷವು ಭಾವಿಸಿದೆ’’ ಎಂದು ರಾಜ್ಯದ ರಾಜಧಾನಿ ಮ್ಯಾಡಿಸನ್‌ನಲ್ಲಿರುವ ವಿಧಾನಸಭೆಯ ಒಳಗಿರುವ ರಿಪಬ್ಲಿಕನ್ ಪಕ್ಷದ ಕಚೇರಿಯಿಂದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಪಾಂಪಿಯೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News