×
Ad

ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಸ್ಪಷ್ಟ ಖಾತರಿ ನೀಡದ ಟ್ರಂಪ್

Update: 2020-09-24 20:06 IST

ವಾಶಿಂಗ್ಟನ್, ಸೆ. 24: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಸೋತರೆ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವ ಪೂರ್ಣ ಖಾತರಿಯನ್ನು ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ನಿರಾಕರಿಸಿದ್ದಾರೆ.

‘‘ಏನಾಗುತ್ತದೆ ಎಂದು ನಾವು ನೋಡುತ್ತೇವೆ’’ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು. ಅಮೆರಿಕದ ಅತ್ಯಂತ ಪ್ರಾಥಮಿಕ ಪ್ರಜಾಸತ್ತಾತ್ಮಕ ಮೌಲ್ಯವಾದ ಅಧಿಕಾರ ಹಸ್ತಾಂತರಕ್ಕೆ ನೀವು ಬದ್ಧರಾಗಿರುವಿರೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂಚೆ ಮತಗಳಿಗೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಟ್ರಂಪ್ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಚೆ ಮತಗಳ ಮೂಲಕ ಅವ್ಯವಹಾರ ನಡೆಸಲು ಡೆಮಾಕ್ರಟಿಕ್ ಪಕ್ಷವು ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ.

‘‘ಅಂಚೆ ಮತದಾನವನ್ನು ತೆಗೆದುಹಾಕಿ. ಆಗ ಶಾಂತಿಯುತವಾಗಿ ಎಲ್ಲ ನಡೆಯುತ್ತದೆ. ಆದರೆ, ನಿಜವಾಗಿಯೂ ಅಧಿಕಾರ ಹಸ್ತಾಂತರ ನಡೆಯುವುದಿಲ್ಲ. ಅಧಿಕಾರ ಮುಂದುವರಿಕೆ ಇರುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News