ಇನ್ನೊಂದು ಡಿಗ್ರಿ ತಾಪಮಾನ ಏರಿದರೆ ಸಮುದ್ರ ಮಟ್ಟ 2.5 ಮೀಟರ್ ಏರಿಕೆ: ಹೊಸ ಅಧ್ಯಯನ

Update: 2020-09-24 14:36 GMT

ಪ್ಯಾರಿಸ್ (ಫ್ರಾನ್ಸ್), ಸೆ. 24: ಭೂಮಿಯ ಸರಾಸರಿ ಮೇಲ್ಮೈ ಉಷ್ಣತೆ ಇನ್ನೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ, ಅಂಟಾರ್ಕ್ಟಿಕವೊಂದರಲ್ಲೇ ಸಮುದ್ರದ ಮಟ್ಟವು 2.5 ಮೀಟರ್ ಏರಲಿದೆ ಎಂದು ವಿಜ್ಞಾನಿಗಳು ಬುಧವಾರ ಎಚ್ಚರಿಸಿದ್ದಾರೆ.

ಜಾಗತಿಕ ನೀರಿನ ಮಟ್ಟವು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾದರೆ ಮುಂಬೈಯಿಂದ ಅಮೆರಿಕದ ಮಯಾಮಿವರೆಗಿನ ಕರಾವಳಿ ನಗರಗಳು ಜಲಾವೃತವಾಗುತ್ತವೆ ಹಾಗೂ ಕೋಟ್ಯಂತರ ಜನರು ನಿರ್ವಸಿತರಾಗುತ್ತಾರೆ. ಈ ಮಟ್ಟದ ಹೆಚ್ಚಳವು ಮುಂದಿನ ನೂರರಿಂದ ಸಾವಿರಾರು ವರ್ಷಗಳ ಅವಧಿಯಲ್ಲಿ ಸಹಜವಾಗಿ ಸಂಭವಿಸಬಹುದಾಗಿದೆ. ಆದರೆ, ಮಾನವನಿರ್ಮಿತ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದಾಗಿ ಈ ವಿಪ್ಲವಕಾರಕ ಬೆಳವಣಿಗೆಯು ದಶಕಗಳ ಅವಧಿಯಲ್ಲೇ ಸಂಭವಿಸಬಹುದಾಗಿದೆ ಎಂದು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯಲ್ಲಿ ಅವರು ಹೇಳಿದ್ದಾರೆ.

ಅಂಟಾರ್ಕ್ಟಿಕದ ಮಂಜುಗಡ್ಡೆ ಕರಗುವಿಕೆಯಿಂದಾಗಿ ಸಂಭವಿಸುವ ಸಮುದ್ರ ಮಟ್ಟ ಏರಿಕೆಯು ಪ್ರತಿ ಹೆಚ್ಚುವರಿ ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯೊಂದಿಗೆ ಅಗಾಧ ಪ್ರಮಾಣದಲ್ಲಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಜಾಗತಿಕ ಸಮುದ್ರಗಳ ಮಟ್ಟವನ್ನು 58 ಮೀಟರ್‌ಗಳಷ್ಟು ಏರಿಸುವಷ್ಟು ಪ್ರಮಾಣದ ಘನೀಕೃತ ನೀರನ್ನು ಅಂಟಾರ್ಕ್ಟಿಕ ಹಿಡಿದಿಟ್ಟುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News