ಅಫ್ಘಾನ್: 28 ಪೊಲೀಸರನ್ನು ಕೊಂದ ತಾಲಿಬಾನ್

Update: 2020-09-24 14:37 GMT

ಕಾಬೂಲ್ (ಅಫ್ಘಾನಿಸ್ತಾನ), ಸೆ. 24: ದಕ್ಷಿಣ ಅಫ್ಘಾನಿಸ್ತಾನದ ಉರುಝ್ಗಾನ್ ಪ್ರಾಂತದ ಗಿಝಾಬ್ ಜಿಲ್ಲೆಯಲ್ಲಿ ತಾಲಿಬಾನ್ ಭಯೋತ್ಪಾದಕರು 28 ಅರೆಸೈನಿಕ ಪೊಲೀಸರನ್ನುಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರದ ನಿಯಂತ್ರಣದಲ್ಲಿರುವ ಜಿಲ್ಲೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿ ಉಗ್ರರು ಅದಕ್ಕೆ ಮುತ್ತಿಗೆ ಹಾಕಿದಾಗ ಈ ಘಟನೆ ಸಂಭವಿಸಿದೆ.

ಪೊಲೀಸರು ಶರಣಾದ ಬಳಿಕ ತಾಲಿಬಾನಿಗಳು ಅವರನ್ನು ಕೊಂದಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಉಗ್ರರು ಇದನ್ನು ನಿರಾಕರಿಸಿದ್ದಾರೆ.

‘‘ನೀವು ಶರಣಾದರೆ ಸುರಕ್ಷಿತವಾಗಿ ಮನೆಗೆ ಹೋಗಬಹುದು ಎಂಬ ಕೊಡುಗೆಯನ್ನು ಮಂಗಳವಾರ ರಾತ್ರಿ ತಾಲಿಬಾನಿಗಳು 28 ಪೊಲೀಸರಿಗೆ ನೀಡಿದರು. ಆದರೆ, ಅವರ ಬಂದೂಕುಗಳನ್ನು ವಶಪಡಿಸಿಕೊಂಡ ಬಳಿಕ, ಅವರೆಲ್ಲರನ್ನೂ ಕೊಂದರು’’ ಎಂದು ಉರುಝ್ಗಿನ್ ಗವರ್ನರ್‌ರ ವಕ್ತಾರರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News