ಮಲ್ಪೆ: ಜೀವದ ಹಂಗು ತೊರೆದು ಮೀನುಗಾರರನ್ನು ರಕ್ಷಿಸಿದ ಯುವಕರಿಗೆ ಸನ್ಮಾನ

Update: 2020-09-24 15:10 GMT

ಮಲ್ಪೆ, ಸೆ.24: ಹವಾಮಾನದ ವೈಪರೀತ್ಯದಿಂದ ಬೋಟ್ ಅವಘಡದಿಂದ ಸಮುದ್ರ ಮಧ್ಯೆ ಸಿಲುಕಿದ್ದ ಎರಡು ಬೋಟಿನ 11 ಮಂದಿ ಮೀನುಗಾರರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಮಲ್ಪೆಯ ಒಂಭತ್ತು ಮಂದಿ ಮೀನುಗಾರ ಯುವಕರನ್ನು ಮಲ್ಪೆ ಟ್ರಾಲ್‌ಬೋಟ್ ಮೀನುಗಾರರ ಸಂಘದ ವತಿಯಿಂದ ಮಂಗಳವಾರ ವುಲ್ಪೆ ಬಂದರಿನಲ್ಲಿ ಸನ್ಮಾನಿಸಲಾಯಿತು.

ಬೊರ್ಗೇರೆಯುವ ಸಮುದ್ರದ ಮಧ್ಯೆ ಅಪಾಯದ ಸ್ಥಿತಿಯಲ್ಲಿದ್ದ ಮೀನು ಗಾರರನ್ನು ರಕ್ಷಿಸಿ ಸಾಹಸ ಮೆರೆದ ಸ್ಥಳೀಯ ಮೀನುಗಾರರಾದ ಗಣೇಶ್ ಸುವರ್ಣ ಕಲ್ಮಾಡಿ, ಮೋಹನ್‌ದಾಸ್ ಕುಂದರ್, ಕಿಶೋರ್ ಕುಮಾರ್ ಬೈಲಕರೆ, ರಂಜಿತ್ ಸಾಲ್ಯಾನ್, ಗಣೇಶ್ ಅಂಪಾರು, ಸಾಗರ್ ಮಲ್ಪೆ ಬೀಚ್, ಪ್ರವೀಣ್ ಕಾಂಚನ್ ತೊಟ್ಟಂ, ಶಶಿಧರ್ ಕುಂದರ್, ಶಶಿಕಾಂತ್ ಕುಂದರ್, ಅಶೋಕ್ ಕರ್ಕೇರ ಲಕ್ಷ್ಮೆಗರ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕಿಶೋರ್ ಪಡುಕರೆ, ಮಾಜಿ ಅಧ್ಯಕ್ಷ ಸುಧಾಕರ ಕುಂದರ್, ಗೌರವ ಸಲಹೆಗಾರ ನಾಗರಾಜ್ ಕುಂದರ್, ಉಪಾಧ್ಯಕ್ಷರಾದ ಕೃಷ್ಣ ಜಿ.ಕೋಟ್ಯಾನ್, ಕಿರಣ್ ಕುಂದರ್, ಕಾರ್ಯದರ್ಶಿ ಸಂತೋಷ್, ಜತೆಕಾರ್ಯದರ್ಶಿ ಸತೀಶ್ ಸಾಲ್ಯಾನ್, ಸಣ್ಣಟ್ರಾಲ್ ಬೋಟ್‌ನ ಹರೀಶ್ಚಂದ್ರ ಕಾಂಚನ್ ಮೊದಲಾದವು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News