ಕ್ಸಿನ್‌ಜಿಯಾಂಗ್‌ನಲ್ಲಿ ಬಂಧನ ಕೇಂದ್ರಗಳ ಸಂಖ್ಯೆ ತುಂಬಾ ಹೆಚ್ಚು: ಆಸ್ಟ್ರೇಲಿಯನ್ ಸಂಘಟನೆ

Update: 2020-09-24 16:30 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಸೆ. 24: ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಬಂಧನ ಕೇಂದ್ರಗಳ ಸಂಖ್ಯೆ ಹಿಂದೆ ಊಹಿಸಿರುವುದಕ್ಕಿಂತಲೂ ತುಂಬಾ ಹೆಚ್ಚಾಗಿದೆ ಹಾಗೂ ಅದು ಈಗಲೂ ವಿಸ್ತರಿಸುತ್ತಿದೆ ಎಂದು ಆಸ್ಟ್ರೇಲಿಯದ ಸಂಘಟನೆ ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ (ಎಎಸ್‌ಪಿಐ)ನ ನೂತನ ಸಂಶೋಧನೆಯೊಂದು ತಿಳಿಸಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಒಳಗಾಗಿರುವ ಉಯಿಘರ್ ಮುಸ್ಲಿಮರ ‘ಮರುಶಿಕ್ಷಣ ಕಾರ್ಯಕ್ರಮ’ವೊಂದನ್ನು ತಾನು ಕೊನೆಗೊಳಿಸುತ್ತಿರುವುದಾಗಿ ಚೀನಾ ನೀಡಿರುವ ಹೇಳಿಕೆಯ ಹೊರತಾಗಿಯೂ ಅವರ ಬಂಧನ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅದು ಹೇಳಿದೆ.

ಕ್ಸಿನ್‌ಜಿಯಾಂಗ್ ವಲಯದಲ್ಲಿ ತಾನು 380ಕ್ಕೂ ಹೆಚ್ಚು ಶಂಕಿತ ಬಂಧನ ಕೇಂದ್ರಗಳನ್ನು ಗುರುತಿಸಿರುವುದಾಗಿ ಅದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಬಂಧನ ಕೇಂದ್ರಗಳಲ್ಲಿ 10 ಲಕ್ಷಕ್ಕೂ ಅಧಿಕ ಉಯಿಘರ್ ಮುಸ್ಲಿಮರು ಮತ್ತು ಟರ್ಕಿ ಭಾಷೆ ಮಾತನಾಡುವ ಮುಸ್ಲಿಮರನ್ನು ಇಡಲಾಗಿದೆ ಎಂದು ವಿಶ್ವಸಂಸ್ಥೆ ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News