ಜಂಇಯ್ಯತುಲ್ ಫಲಾಹ್ ಯೂತ್ ಅಸೋಸಿಯೇಶನ್ ಮಿತ್ತಬೈಲು : ಮಜ್ಲಿಸುನ್ನೂರು ಕಾರ್ಯಕ್ರಮ

Update: 2020-09-24 18:10 GMT

ಬಂಟ್ವಾಳ: ಜಂ ಇಯ್ಯತುಲ್ ಫಲಾಹ್ ಯೂತ್ ಅಸೋಸಿಯೇಶನ್ ಮಿತ್ತಬೈಲು ಇದರ ದ್ವಿತೀಯ ವಾರ್ಷಿಕ ಮಜ್ಲಿಸುನ್ನೂರು ಕಾರ್ಯಕ್ರಮ ಮರ್ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಪುತ್ರ ಇರ್ಷಾದ್ ದಾರಿಮಿ ಅಲ್ ಜಝ್ಅರಿ ನೇತೃತ್ವದಲ್ಲಿ ನಡೆಯಿತು.

ಮಿತ್ತಬೈಲು ಕೇಂದ್ರ ಜುಮಾ ಮಸೀದಿಯ ಖತೀಬ್ ಅಶ್ರಫ್ ಫೈಝಿ ಅಧ್ಯಕ್ಷತೆ ವಹಿಸಿದ್ದರು, ಸೈಯ್ಯಿದ್ ಬಾಸೀತ್ ತಂಙಳ್ ಕಾರ್ಯಕ್ರಮ  ಉದ್ಘಾಟಿಸಿದರು. ಮಿತ್ತಬೈಲು ಮುದರ್ರಿಸರಾದ ಉಮರುಲ್ ಪಾರೂಕ್ ಫೈಝಿ ದುಃವಾ  ನೆರೆವೇರಿಸಿದರು, ಅಬ್ದುಲ್ ಹಕೀಂ ಯಮಾನಿ ಸ್ವಾಗತಿಸಿದರು, ಶೈಖುನಾ ಮಿತ್ತಬೈಲು ಉಸ್ತಾದರ ತವಸ್ಸುಲ್ ಬೈತ್ ಸೈಯ್ಯಿದ್ ಬಾಸಿತ್ ತಂಙಳ್ ರವರು ಮುಹ್ಸೀನ್ ಫೈಝಿ ಯವರಿಗೆ  ನೀಡಿ ಬಿಡುಗಡೆಗೊಳಿಸಿದರು, ಶೈಖುನಾ ಮಿತ್ತಬೈಲು ಉಸ್ತಾದರ ಮಕ್ಕಳಾದ ಹಾಸಿಂ ಅರ್ಶದಿ, ಮಹಮ್ಮದ್ ಅಲಿ ಅರ್ಶದಿ, ಫತಹುಲ್ಲಾ ದಾರಿಮಿ,ಮುಂಝಿರ್ ಅರ್ಶದಿ, ಅಬ್ದುಲ್ ರಹ್ಮಾನ್ ಅನ್ಸಾರಿ, ಅಬೂಬಕ್ಕರ್ ಅನ್ಸಾರಿ, ಅಬ್ದುಲ್ಲ ಜಲಾಲಿ, ಮುಖ್ಯ ಅತಿಥಿಗಳಾಗಿ ಅಶ್ರಫ್ ಫೈಝಿ ನಂದಾವರ ಮಜೀದ್ ಫೈಝಿ ನಂದಾವರ, ಇಬ್ರಾಹಿಂ ಮುಸ್ಲಿಯಾರ್ ಕುಮೆರು, ಸೈಯ್ಯಿದ್ ಫಲುಲ್ ತಂಙಳ್ , ಇಲ್ಯಾಸ್ ಮಂಗಳೂರು ,ಸಲಾಂ ಕೈಕಂಬ ಕಾರ್ಯದರ್ಶಿ ಕೇಂದ್ರ ಜುಮಾ ಮಸೀದಿ ಮಿತ್ತಬೈಲು ಹಾಗೂ ಉಲಾಮ ಉಮರಾ ನೇತಾರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News