ಭಾರತದಲ್ಲಿ ತನ್ನ ಮಾರಾಟ ಮತ್ತು ಉತ್ಪಾದನಾ ಫ್ಯಾಕ್ಟರಿ ಸ್ಥಗಿತಗೊಳಿಸಲಿರುವ ಹಾರ್ಲೆ-ಡೇವಿಡ್ಸನ್

Update: 2020-09-25 09:48 GMT
ಚಿತ್ರ ಕೃಪೆ: financialexpress

ಹೊಸದಿಲ್ಲಿ: ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಹಾರ್ಲೆ-ಡೇವಿಡ್ಸನ್ ಇಂಕ್ ತಾನು ಭಾರತದಲ್ಲಿ ಮಾರಾಟ ಮತ್ತು ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಭಾರತದಲ್ಲಿ ನೆಲೆಯೂರಲು ಕಳೆದ ಒಂದು ದಶಕದಿಂದ ತಾನು ನಡೆಸಿದ ಪ್ರಯತ್ನದಲ್ಲಿ ಸಫಲವಾಗದೆ ಕೊನೆಗೂ ಸಂಸ್ಥೆ  ಕೈಚೆಲ್ಲಿದೆ.

ಗುರ್ಗಾಂವ್‍ನಲ್ಲಿನ ತನ್ನ ಸೇಲ್ಸ್ ಕಚೇರಿಯೊಂದನ್ನು ಹೊರತು ಪಡಿಸಿ ಸಂಸ್ಥೆ ಭಾರತದಲ್ಲಿ ತನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅಂತ್ಯಗೊಳಿಸಲಿದೆ. ಸಂಸ್ಥೆಯ ಬಾವಲ್ ಫ್ಯಾಕ್ಟರಿ ಕೂಡ ಮುಚ್ಚಲಾಗುವುದು ಎಂದು ತಿಳಿದು ಬಂದಿದೆ.

ಕಳೆದ 14 ತ್ರೈಮಾಸಿಕಗಳಲ್ಲಿ ತನ್ನ ಮಾರಾಟದಲ್ಲಿ ಪ್ರಗತಿ ಸಾಧಿಸಲು ಸಂಸ್ಥೆ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News