×
Ad

ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಮೂವರು ಉಗ್ರರಲ್ಲ, ಕಾರ್ಮಿಕರು: ಡಿಎನ್‍ಎ ಪರೀಕ್ಷೆಯಿಂದ ಬಹಿರಂಗ

Update: 2020-09-25 17:49 IST
ಸಾಂದರ್ಭಿಕ ಚಿತ್ರ

ಶ್ರೀನಗರ್: ಜುಲೈ ತಿಂಗಳಲ್ಲಿ ಜಮ್ಮು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ನಡೆದಿತ್ತೆನ್ನಲಾದ ಎನ್‍ಕೌಂಟರ್‍ ನಲ್ಲಿ ಹತರಾಗಿದ್ದಾರೆಂದು ತಿಳಿಯಲಾಗಿದ್ದ ಮೂವರು ಶಂಕಿತ ಉಗ್ರರು ವಾಸ್ತವವಾಗಿ ಉಗ್ರರಾಗಿರಲಿಲ್ಲ ಬದಲು ರಜೌರಿಯ ಕಾರ್ಮಿಕರಾಗಿದ್ದರು ಎಂದು ಡಿಎನ್‍ಎ ಪರೀಕ್ಷೆಯಿಂದ ತಿಳಿದು ಬಂದಿದೆ.

ಈ ಎನ್‍ಕೌಂಟರ್‍ ನಲ್ಲಿ ಮೃತಪಟ್ಟಿದ್ದ ಅಬ್ರಾರ್ (20), ಇಮ್ತಿಯಾಝ್, ಇಬ್ರಾರ್ ಅಹ್ಮದ್ (17) ಸೋದರ ಸಂಬಂಧಿಗಳಾಗಿದ್ದರು ಹಾಗೂ ಕಾಮಿರ್ಕರಾಗಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೇನೆ ನಡೆಸಿದ ಕೋರ್ಟ್ ಆಫ್ ಎಂಕ್ವೈರಿಯಲ್ಲಿ ಈ ಎನ್‍ಕೌಂಟರ್ ನಲ್ಲಿ ಶಾಮೀಲಾಗಿದ್ದ ಸೈನಿಕರನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದ್ದು ಅವರ ವಿರುದ್ಧ ಸೇನಾ ಕಾಯಿದೆಯಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆಯಿಂದ ಪ್ರದತ್ತವಾದ ಅಧಿಕಾರವನ್ನು ಬಳಸಿ ಹಾಗೂ ಕೆಲವೊಂದು ನಿಯಮಾವಳಿಗಳನ್ನು ಈ ಸೈನಿಕರು ಉಲ್ಲಂಘಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ಎನ್‍ಕೌಂಟರ್ ನ ಚಿತ್ರಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News