​ಚೀನಾದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಸುಮಾರು 16,000 ಮಸೀದಿಗಳನ್ನು ನೆಲಸಮಗೊಳಿಸಿದ ಆಡಳಿತ: ವರದಿ

Update: 2020-09-25 12:59 GMT

ಬೀಜಿಂಗ್:  ಇತ್ತೀಚಿಗಿನ ವರ್ಷಗಳಲ್ಲಿ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಸುಮಾರು 16,000 ಮಸೀದಿಗಳನ್ನು ಅಲ್ಲಿನ ಪ್ರಾಧಿಕಾರಗಳು ನೆಲಸಮಗೊಳಿಸಿವೆ ಎಂದು ಆಸ್ಟ್ರೇಲಿಯನ್ ಸ್ಟ್ರೆಟಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ ಹೇಳಿದೆ. ಉಪಗ್ರಹ ಚಿತ್ರಗಳನ್ನಾಧರಿಸಿ ಈ ವರದಿ ತಯಾರಿಸಲಾಗಿದೆ.

ಹೆಚ್ಚಿನ ಮಸೀದಿಗಳನ್ನು ಕಳೆದ ಮೂರು ವರ್ಷಗಳಲ್ಲಿ ನೆಲಸಮಗೊಳಿಸಲಾಗಿದೆ, ಅವುಗಳ ಪೈಕಿ 8,500 ಮಸೀದಿಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಹೇಳಿರುವ ವರದಿ ಉರುಮ್ಖಿ ಹಾಗೂ ಕಶ್ಗರ್  ಹೊರವಲಯಗಳಲ್ಲಿ ಗರಿಷ್ಠ ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದೆ.

ಕೆಲವೊಂದು ಮಸೀದಿಗಳು ಬಚಾವಾಗಿದ್ದರೂ ಅವುಗಳ ಗೋಪುರಗಳನ್ನು ಒಡೆಯಲಾಗಿದೆ ಎಂದು ವರದಿ ಹೇಳಿದೆ. ಸದ್ಯ ಕ್ಸಿನ್ಜಿಯಾಂಗ್ ಪ್ರಾಂತ್ಯದ ಸುತ್ತಮುತ್ತ 15,500ಕ್ಕೂ ಕಡಿಮೆ ಸಂಖ್ಯೆಯ ಸುಸ್ಥಿತಿಯಲ್ಲಿರುವ ಹಾಗೂ  ಹಾನಿಗೊಳಗಾದ ಮಸೀದಿಗಳಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಇದು ನಿಖರ ಸಂಖ್ಯೆಯಾಗಿದ್ದಲ್ಲಿ 1960ರ ಸಾಂಸ್ಕೃತಿಕ ಕ್ರಾಂತಿಯ ನಂತರ ಈ ಪ್ರದೇಶದಲ್ಲಿ ಈಗ ಕನಿಷ್ಠ ಸಂಖ್ಯೆಯ ಮುಸ್ಲಿಂ ಪ್ರಾರ್ಥನಾಲಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News