ಬಿಐಟಿಗೆ ಕೆಎಸ್‌ಸಿಎಸ್‌ಟಿ ಅತ್ಯುತ್ತಮ ಪ್ರೊಜೆಕ್ಟ್ ಪ್ರಶಸ್ತಿ

Update: 2020-09-25 14:16 GMT

ಮಂಗಳೂರು, ಸೆ. 25: ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಆಯೋಜಿಸಿದ 2019-20ರ ಅತ್ಯುತ್ತಮ ಪ್ರೊಜೆಕ್ಟ್ ಪ್ರಶಸ್ತಿಯನ್ನು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಪಡೆದುಕೊಂಡಿದೆ.

ಕೆಎಸ್‌ಸಿಎಸ್‌ಟಿ ಆಯೋಜಿಸಿದ್ದ ಸಿವಿಲ್ ಶ್ರೇಯಲ್ಲಿ ವಿದ್ಯಾರ್ಥಿ ಪ್ರೊಜೆಕ್ಟ್ ಕಾರ್ಯಕ್ರಮದ 43ನೇ ಸರಯಲ್ಲಿ ಬಿಐಟಿ ಅಂತಿಮ ವರ್ಷದ ವಿದ್ಯಾರ್ಥಿ ಗಳಾದ ನೂಮನ್ ಅಶ್ರಫ್, ಮುಹಮ್ಮದ್ ಅರ್ಸ್ಲಾನ್ ಆಝಾದ್, ಶಹನಾಝ್ ಪಿ.ಜೆ. ಹಾಗೂ ನಫೀಸಾ ಸುಹೈಲಾ ರೂಪಿಸಿದ ‘ಅಸೆಸ್‌ಮೆಂಟ್ ಆಫ್ ಗ್ರೀನ್ ಬ್ಯಾರೀಸ್ ಅರೇನಾ ಬೈ 6ಡಿ ಬಿಲ್ಡಿಂಗ್ ಇನ್ಫಾರ್ಮೇಶನ್ ಮಾಡೆಲಿಂಗ್ ಕಂಪ್ಯಾರ್ಡ್‌ ವಿತ್ ಕನವೆನ್ಶನಲ್ ಮೆತಡ್’  ಪ್ರೊಜೆಕ್ಟ್‌ಗೆ ಪ್ರಶಸ್ತಿ ದೊರಕಿದೆ.

ಈ ಪ್ರೊಜೆಕ್ಟ್‌ಗೆ ಸಿವಿಲ್ ವಿಭಾಗದ ಪ್ರೊ. ಝಹೀರ್ ಅಹ್ಮದ್ ಮಾರ್ಗದರ್ಶನ ನೀಡಿದ್ದರು. ಈ ಸಾಧನೆಗೆ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಹಾಗೂ ಬಿಐಟಿಯ ಪ್ರಾಂಶುಪಾಲ ಡಾ. ಎಸ್.ಐ. ಮಂಜೂರ್ ಬಾಷಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News