ಭಾರತ-ಚೀನಾ ಗಡಿ ವಿವಾದ: ಸಹಾಯಕ್ಕೆ ನಾವು ಸಿದ್ಧ ಎಂದ ಟ್ರಂಪ್

Update: 2020-09-25 14:29 GMT

ವಾಶಿಂಗ್ಟನ್, ಸೆ. 25: ಭಾರತ ಮತ್ತು ಚೀನಾಗಳು ತಮ್ಮ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಸಮರ್ಥವಾಗುತ್ತವೆ ಎಂಬ ವಿಶ್ವಾಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ವ್ಯಕ್ತಪಡಿಸಿದ್ದಾರೆ ಹಾಗೂ ಈ ವಿಷಯದಲ್ಲಿ ಸಹಾಯ ಮಾಡಲು ಸಿದ್ಧನಿರುವುದಾಗಿ ಹೇಳಿದ್ದಾರೆ.

‘‘ಚೀನಾ ಮತ್ತು ಭಾರತಗಳ ನಡುವೆ ಈಗ ಅತ್ಯಂತ ಗಂಭೀರ ಸಮಸ್ಯೆಯಿದೆ ಎನ್ನುವುದು ನನಗೆ ತಿಳಿದಿದೆ. ತಮ್ಮ ನಡುವಿನ ವಿವಾದವನ್ನು ಬಗೆಹರಿಸಿಕೊಳ್ಳಲು ಅವುಗಳಿಗೆ ಸಾಧ್ಯವಾಗುತ್ತದೆ ಎಂದು ನಾನು ಆಶಿಸುತ್ತೇನೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ನಮಗೆ ಸಹಾಯ ಮಾಡಲು ಸಾಧ್ಯವಾಗುವುದಾದರೆ, ಸಹಾಯ ಮಾಡಲು ನಾವು ಸಿದ್ಧರಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News